ಬಂಟ್ವಾಳ: ಅನಗತ್ಯವಾಗಿ ತಿರುಗಾಟ ನಡೆಸುವವರ ವಾಹನಗಳನ್ನು ವಶಕ್ಕೆ ಪಡೆಯುವ ಪೋಲೀಸರ ಕಾರ್ಯ ಇಂದು ಕೂಡಾ ಮುಂದುವರಿದಿತ್ತು.


ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ಅವರು ಮೆಲ್ಕಾರ್ ಜಂಕ್ಷನ್ ನಲ್ಲಿ ಬೆಳಿಗ್ಗೆಯಿಂದಲೇ ರಸ್ತೆಗಳಿದು ಕಾರ್ಯಚರಣೆ ನಡೆಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತಗಳ ನೆಪ ಹೇಳಿ ತಿರುಗಾಟ ನಡೆಸುವ ಸವಾರರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಿನ ಸವಾರರಿಗೆ ಎಚ್ಚರ ನೀಡಿದರೂ ಅನಗತ್ಯ ತಿರುಗಾಟಕ್ಕೆ ಬ್ರೇಕ್ ನೀಡಬೇಕು ಎಂಬ ಉದ್ದೇಶದಿಂದ ಪೋಲೀಸರು ಪ್ರತಿ ದಿನ ಕಾರ್ಯಚರಣೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

