Friday, July 4, 2025

ಟ್ರಾಫಿಕ್ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ವಿಡಿಯೋ ವೈರಲ್ : ಇಬ್ಬರು ಪೋಲೀಸ್ ವಶಕ್ಕೆ

ಬಂಟ್ವಾಳ: ಟ್ರಾಪಿಕ್ ಪೋಲೀಸರ ಕರ್ತವ್ಯ ಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಟ್ರಾಫಿಕ್ ಪೋಲೀಸರು ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ರಸ್ತೆ ಬದಿಯಲ್ಲಿ ವಾಹನಗಳ ತಪಾಸಣೆ ನಡೆಸಿ ರಸ್ತೆ ನಿಯಮಗಳನ್ನು ಪಾಲಿಸದ ಮತ್ತು ಟ್ರಾಫಿಕ್ ರೂಲ್ ಗಳನ್ನು ಪಾಲಿಸದ ವಾಹನ ಸವಾರರಿಗೆ ಕೇಸು ದಾಖಲಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಟ್ರಾಫಿಕ್ ಎಸ್.ಐ.ಸಹಿತ ಪೋಲೀಸ್ ಸಿಬ್ಬಂದಿ ಗಳಿಗೆ ಕರ್ತವ್ಯ ಕ್ಕೆ ಅಡ್ಡಿಪಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು.
ಈ ಆಧಾರದ ಲ್ಲಿ ಬಂಟ್ವಾಳ ನಗರ ಪೋಲಿಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಟ್ರಾಫಿಕ್ ಪೋಲೀಸರಿಗೆ ಕಾನೂನಿನ ಪಾಠ ಹೇಳುವಂತಹ ವಿಡಿಯೋ ಜೊತೆಗೆ ಇಲ್ಲಿಂದ ತೆರಳಿ ಎಂದು ಹೇಳುವ ವಿಡಿಯೋ ವೈರಲ್ ಅಗಿದೆ, ಜೊತೆಗೆ ಕಾನೂನು ಪಾಲಿಸದ ಈ ಸವಾರರಿಗೆ ನೀಡಿದ ನೋಟೀಸ್ ಅನ್ನು ಹರಿದುಬಿಸಾಡುತ್ತೇನೆ ಎಂದು ಕೂಡಾ ವಿಡಿಯೋ ದಲ್ಲಿ ಹೇಳಲಾಗಿದೆ.
ಪೋಲೀಸ್ ಸಿಬ್ಬಂದಿ ಅವರು ಏಕವಚನದಲ್ಲಿ ಸವಾರರನ್ನು ಕರೆದಿದ್ದಾರೆ ಎಂದು ಹೇಳಿದ ಬಳಿಕ ನೀವು ಹಣ ಲೂಟಿ ಮಾಡುತ್ತಿದ್ದೀರಿ, ನೀವು ಇಲ್ಲಿಂದ ತೆರಳಿ, ನಿಮಗೆ ಅಧಿಕಾರ ನೀಡಿದವರು ಯಾರು ಎಂದು ಅವರು ಪೋಲೀಸರಿಗೆ ಪ್ರಶ್ನೆ ಮಾಡುವ ವಿಡಿಯೋ ವೈರಲ್ ಅಗಿದೆ.

ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೋಲೀಸರ ಕರ್ತವ್ಯ ಕ್ಕೆ ಅಡ್ಡಿಪಡಿಸುವ ಪಡಿಸುವ ಅನೇಕ ಘಟನೆಗಳು ನಡೆಯುತ್ತಿದೆ.
ಇಂತಹ ಪ್ರಕರಣಗಳ ಬಗ್ಗೆ ಸೂಕ್ತವಾದ ಕಾನೂನು ಕ್ರಮಗಳನ್ನು ಪೋಲೀಸ್ ಇಲಾಖೆ ಕೈಗೊಳ್ಳದಿದ್ದರೆ, ಟ್ರಾಫಿಕ್ ಪೋಲೀಸರ ಕರ್ತವ್ಯ ಕ್ಕೆ ಇನ್ನಷ್ಟು ತೊಂದರೆ ಅಗಲಿದೆ ಹಾಗಾಗಿ ಪೋಲೀಸರಿಗೆ ನೈತಿಕ ಬೆಂಬಲ ನೀಡಲು ಅಂತವರ ಮೇಲೆ ಕ್ರಮ ಕೈಗೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಗಳು ಹರಿದಾಡುತ್ತಿದೆ

More from the blog

ಬೆಂಜನಪದವು ಶಾಲೆ : ಉಚಿತ ಯಕ್ಷಗಾನ ನಾಟ್ಯ ತರಗತಿ ಶುಭಾರಂಭ..

ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು. ಫೌಂಡೇಶನ್ ನ ಸಂಚಾಲಕರಾದ ಶ್ರೀ ವಾಸುದೇವ ಐತಾಳ್ ದೀಪ...

ಜು.12ರಂದು ಬಂಟ್ವಾಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್..

ಬಂಟ್ವಾಳ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜು.12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರ...

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...