ಬಂಟ್ವಾಳ: 14 ನೇ ಹಣಕಾಸು ಯೋಜನೆ ಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷ ತೆಯಲ್ಲಿ ಬಿಸಿರೋಡಿನ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
2015-16 ನೇ ಸಾಲಿನಿಂದ 2019-20 ಸಾಲಿನವರೆಗೆ 14 ನೇ ಹಣಕಾಸು ಯೋಜನೆ ಯ ಅನುದಾನವು ಈಗಾಗಲೇ ಗ್ರಾಮ ಪಂಚಾಯತ್ ಖಾತೆಗೆ ಬಿಡುಗಡೆ ಯಾಗಿದ್ದು , ಅನುದಾನವನ್ನು ಸಂಪೂರ್ಣ ವಾಗಿ ವೆಚ್ಚ ಭರಿಸದೇ ಇರುವ ಬಗ್ಗೆ ತಾ.ಪಂ.ಅಧ್ಯಕ್ಷ ರ ನೇತ್ರತ್ವದಲ್ಲಿ ಸಭೆ ನಡೆಸಲಾಯಿತು.
ಶೀಘ್ರವಾಗಿ ಉಳಿದಿರುವ ಕಾಮಗಾರಿಗಳನ್ನು ನಡೆಸಿ ಬಿಲ್ ನೀಡುವಂತೆ ಪಿ.ಡಿ.ಒ.ಹಾಗೂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ತಿಳಿಸಿದರು.
ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸಿ, ಯೋಜನೆಗಳಿಗೆ ಸರಕಾರದಿಂದ ಬರುವ ಅನುದಾನ ಗಳ ಬಳಕೆ ಮಾಡಿ ಎಂದು ಅವರು ತಿಳಿಸಿದರು.
ಸಭೆಗೆ ಬರುವ ವೇಳೆ ಸ್ಪಷ್ಟವಾದ ಎಲ್ಲಾ ಮಾಹಿತಿ ಮತ್ತು ದಾಖಲೆಗಳು ತರಬೇಕು ಕಾಟಾಚಾರಕ್ಕೆ ಸಭೆಗೆ ಬಂದು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಿಲ್ಲ ದೆ ಸಭೆಗೆ ಹಾಜರಾಗಿ ಸಮಯ ವ್ಯರ್ಥ ಮಾಡುವ ಕೆಲಸ ಮಾಡಬೇಡಿ ಎಂದು ತಾ.ಪ.ಇ.ಒ.ರಾಜಣ್ಣ ಪಿ.ಡಿ.ಒಗಳಿಗೆ ಗರಂ ಅಗಿ ಹೇಳಿದರು.
ಸಭೆಗೆ ಹಾಜರಾಗುವ ವೇಳೆ ಪೂರ್ವತಯಾರಿ ಯಿಂದ ಬನ್ನಿ ಎಲ್ಲಾ ಕಾಮಗಾರಿ ಯ ವಿವರ ಸರಿಯಾಗಿ ಇರಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ, ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ ಸಾಲ್ಯಾನ್ ಉಪಸ್ಥಿತರಿದ್ದರು

