Tuesday, January 27, 2026

ಟಿಕ್ ಟಾಕ್ ಮೂಲಕ ಕೊರೋನಾ ಜಾಗೃತಿ ಮಾಮೇಶ್ವರದ ಯುವಕನಿಂದ ಚಮತ್ಕಾರ

 

ಮೌನೇಶ ವಿಶ್ವಕರ್ಮ

ಬಂಟ್ವಾಳ:  ಸಮಯ ಕಳೆಯಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವವರೇ ಹೆಚ್ಚು. ಅದರಲ್ಲೂ ಹಾಸ್ಯ ಸನ್ನಿವೇಶಕ್ಕಾಗಿ ಟಿಕ್ ಟಾಕ್ ಆ್ಯಪ್ ಬಳಕೆ ಮಾಡುವವರೂ ಇದ್ದಾರೆ. ಆದರೆ ಬಂಟ್ವಾಳದ ಕುಟುಂಬವೊಂದು ಟಿಕ್ ಟಾಕ್ ಮೂಲಕ ಕೊರೋನಾ ವೈರಸ್ ಕುರಿತಾಗಿ ಜಾಗೃತಿ ಮೂಡಿಸಿ ಗಮನ ಸೆಳೆಯುತ್ತಿದೆ.

 

ತಾಲೂಕಿನ  ಅನಂತಾಡಿ ಗ್ರಾಮದ ಮಾಮೇಶ್ವರದ ಸಂಕೇಶ ದಲ್ಲಿ ವಾಸ್ತವ್ಯ ವಿರುವ  ಈ ಕುಟುಂಬದ ಯುವಕ ಧನರಾಜ್ ಆಚಾರ್  ಬೆಂಗಳೂರಿನಲ್ಲಿ ಕಿರುತೆರೆ ಚಾನೆಲ್ ನಲ್ಲಿ  ಉದ್ಯೋಗಿಯಾಗಿದ್ದು, ಕೊರೋನಾ ಲಾಕ್ ಡೌನ್‌ ಹಿನ್ನೆಲೆಯ ರಜೆಯ ಕಾರಣಕ್ಕೆ ಊರಿಗೆ ಬಂದವನು ಮನೆಮಂದಿಯನ್ನೆಲ್ಲಾ   ಸೇರಿಸಿಕೊಂಡು ಕೊರೋನಾ ಜಾಗೃತಿಯ ಟಿಕ್‌ಟಾಕ್ ದೃಶ್ಯಗಳನ್ನು ನಿರ್ಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಟಿಕ್ ಟಾಕ್ ದೃಶ್ಯಾವಳಿಗಳ‌ ಸಾರಾಂಶ ಇಂತಿದೆ..
ಪಾರ್ಕ್ ಗೆ ಬರುವ ಪ್ರೇಮಿಗಳು, ಅಲ್ಲಿಯ ಜನರು ಹೋಗುವಂತರ ಮಾಡಲು ಪಾರ್ಕ್ ನಲ್ಲಿ ಕೊರೋನಾ ಇದೆ ಎಂದು ಬೊಬ್ಬೆ ಹೊಡೆಯುತ್ತಾನೆ, ಪರಿಣಾಮ ಇದ್ದವರೆಲ್ಲಾ ಓಡಿಹೋಗುತ್ತಾರೆ.ಕೊನೆಗೆ ಪಾರ್ಕ್‌ನಲ್ಲಿ ಕೊರೋನಾ ಇದೆ ಎಂದು‌ಸುಳ್ಳು ಸುದ್ದಿ ಹರಡಿಸಿದ‌ ಪ್ರೇಮಿಯನ್ನು ಪೊಲೀಸರು ಬಂಧಿಸಿ‌ಲಾಕಪ್ ಗೆ ತಳ್ಳುತ್ತಾರೆ. ಕೊರೋನಾ‌ಬಗ್ಗೆ ಅಪಪ್ರಚಾರ ಬೇಡ ಎನ್ನುತ್ತದೆ ಈ ಟಿಕ್ ಟಾಕ್ ದೃಶ್ಯ.
ಕೊರೋನಾ‌ ರಕ್ಕಸರು ಮನೆಯಿಂದ ಹೊರಗೆ ಕಾಯುತ್ತಿದ್ದಾರೆ.ಮನೆಯಿಂದ‌ಹೊರ‌ ಹೋಗಬೇಡಿ ಲಕ್ಷ್ಮಣ ರೇಖೆ ಹಾಕಿಕೊಂಡು ಮಬೆಯಲ್ಲಿರಿ ಎಂದು‌ ಪ್ರಧಾನಿ ಮಾತುಗಳನ್ನು ಪಾಲಿಸುತ್ತಿದ್ದ ಗೃಹಿಣಿಯೊಬ್ಬಳಿಗೆ ಕೊರೋನಾ ರಕ್ಕಸರು ತರಕಾರಿಯ  ಆಸೆ ತೋರಿಸಿ ಮನೆಯಿಂದ‌ ಹೊರಬರುವಂತೆ ಮಾಡುತ್ತಾರೆ. ಅದರಂತೆ ಗೃಹಿಣಿ ಹೊರ‌ಬರುತ್ತಾಳೆ. ಆದರೆ‌ ಹೊರಗೆ ಬರುವ ಗೃಹಿಣಿ ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸರ್ ನಿಂದ ಶುದ್ಧಮಾಡುವ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುತ್ತಾಳೆ, ಆಗ ಕೊರೋನಾ ರಕ್ಕಸನೇ ಹೆದರಿ ಓಡುವ ಟಿಕ್ ಟಾಕ್‌ ಕೂಡ ಕೆಲವೇ ಸೆಕೆಂಡ್ ಗಳಲ್ಲಿ ಅಗಾಧ ಜಾಗೃತಿ‌ ಸಂದೇಶ ನೀಡುತ್ತದೆ.
ಲಾಕ್ ಡೌನ್ ನ ಆದೇಶ ಇದ್ದರೂ ಮನೆಯಿಂದ ಹೊರಗೆ ಹೋಗುತ್ತೇನೆಂದು ಮನೆಯ ಮಗ ತಾಯಿಯಲ್ಲಿ ಹೇಳುತ್ತಾನೆ.ಅದಕ್ಕೆ ಅವನ ಸಹೋದರಿ ಬೆಂಬಲ ಸೂಚಿಸಿ, ಏನಾದ್ರೂ ತಿಂದು ಬರಲಿ ಎನ್ನುತ್ತಾಳೆ. ತಂಗಿಗೆ ಥ್ಯಾಂಕ್ಸ್ ಹೇಳುವ ಅಣ್ಣ, ತಾಯಿಯ ಮಾತು ಮೀರಿ  ರಸ್ತೆಗಿಳಿಯುತ್ತಾನೆ. ಲಾಕ್ ಡೌನ್ ಉಲ್ಲಂಘಿಸಿ ದ ಕಾರಣಕ್ಕೆ ಪೊಲೀಸರ ಲಾಠಿ ಏಟನ್ನು ತಿಂದು ವಾಪಾಸಾಗುತ್ತಾನೆ.  ತಿಂದು ಬರುತ್ತಾನೆ ಎಂದ ತಂಗಿಯ ಮಾತಿನ ತಾತ್ಪರ್ಯ ಅರಿತು ತಾಯಿ ನಗುತ್ತಾಳೆ. ಕೊನೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಬೇಡಿ ಎನ್ನುವ ಸಂದೇಶ ನೀಡಲಾಗಿದೆ.
ಕೊರೋನಾ ಬರುವ ಮೊದಲು ಸಾಕುನಾಯಿಯನ್ನು ಮನೆಯಲ್ಲಿ ಕಟ್ಟಿಹಾಕಿ ಯುವಕ ಎಲ್ಲೆಂದರಲ್ಲಿ ಆಡುತ್ತಿದ್ದ, ಅದೇ ಕೊರೋನ ಬಂದ ಬಳಿಕ ಮನೆಯಲ್ಲೇ ಕುಳಿತ್ತಿದ್ದ, ಆದರೆ ಮನೆಯ  ಸಾಕುನಾಯಿ ಎಲ್ಲೆಂದರಲ್ಲಿ ಆಡುತ್ತಿತ್ತು. ಈ ದೃಶ್ಯದ ಮೂಲಕ ಮನುಷ್ಯನ ಈಗಿನ  ಸಾಮಾಜಿಕ ಸ್ಥಿತಿಯನ್ನು ಮನೋಜ್ಞವಾಗಿ‌ ಬಿಂಬಿಸಲಾಗಿದೆ.
ಉಳಿದಂತೆ ಕೊರೋನಾ ಕುರಿತಾಗಿ ಕೆಮ್ಮುವ ದನಿಯ ರಿಂಗ್ ಟೋನ್ ಬಗ್ಗೆ, ಮನೆಯೊಳಗೇ ಇದ್ದು ವರ್ಕ್  ಫ್ರಮ್ ಹೋಮ್  ಗೆ  ಆದ್ಯತೆ ಗೆ ಒತ್ತು ನೀಡುವ , ಗೋ ಕೊರೋನಾ ಎಂದು ಪ್ರತಿಭಟಿಸುವರ ಬಗ್ಗೆ  ಹಾಗೂ ಮಾಸ್ಕ್ ಹಾಕಿ ನಾಳೆ ಎಂದು ಬರೆದು ತಿರುಗಾಡುವ ವ್ಯಕ್ತಿಗಳ ಕುರಿತಾಗಿಯೂ ಮಾಡಿರುವ ವಿಡಿಯೋಗಳು ಗಮನಸೆಳೆದಿವೆ.
ಮನೆಯೊಳಗೇ ಇರಿ, ಮನೆಯವರ ಜೊತೆಗೇ ಇರಿ ಎನ್ನುವ ಕೊರೋನಾ ನಿಗ್ರಹದ ಎಲ್ಲಾ ನಿಯಮಗಳನ್ನು ಪಾಲಿಸುತ್ತಲೇ ಇರುವ ಈ ಕುಟುಂಬ ನಡೆಸುತ್ತಿರುವ ಟಿಕ್ ಟಾಕ್ ಜಾಗೃತಿ ನಿಜಕ್ಕೂ ಪ್ರಶಂಸನೀಯ.

ಧನರಾಜ್ ಚಮತ್ಕಾರ  ಇದೇ ಮೊದಲಲ್ಲ..
ಪತ್ರಿಕೋದ್ಯಮದ ಪದವಿ ಪೂರೈಸಿರುವ ಧನರಾಜ್ ಮೈಸೂರು ರಂಗಾಯಣದಲ್ಲಿ ಎರಡು ವರ್ಷ ರಂಗಪಾಠವನ್ನೂ ಕರಗತ ಮಾಡಿಕೊಂಡವರು. ಉದಯಟಿವಿಯಲ್ಲಿ  ಉದ್ಯೋಗಿಯಾಗಿರುವ ಇವರು, ತನ್ನಬೆಂಗಳೂರು ಸ್ನೇಹಿತರ ಜೊತೆ ಸೇರಿ ಈಗಾಗಲೇ ಅನೇಕ ಜಾಗೃತಿ ವಿಡಿಯೋಗಳನ್ನು ಮಾಡಿ ಗಮನ ಸೆಳೆದವರು. ಈವರೆಗೆ ೧೮೮ಕ್ಕೂ ಅಧಿಕ ಟಿಕ್ ಟಾಕ್ ವಿಡಿಯೋ ನಿರ್ಮಿಸಿದ್ದಾರೆ.
ಪಂಪ್ವೆಲ್‌ ಫ್ಲೈಓವರ್ ಕುರಿತಾಗಿ ಇವರು ನಿರ್ಮಿಸಿದ‌ ಟಿಕ್ ಟಾಕ್ ಸಾಮಾಜಿಕ ಜಾಲತಾಣಗಳಲ್ಲಿ  ವಿಶೇಷ ಮನ್ನಣೆಗೆ ಪಾತ್ರವಾಗಿತ್ತು, ಅಲ್ಲದೆ ಬಳಿಕ ಉಳ್ಳಾಲದ ಒಂಭತ್ತು ಎಕ್ರೆ ಮನೆಗಳು, ಸುಳ್ಯದ ಕರೆಂಟ್ ಸಮಸ್ಯೆ ಕುರಿತಾದ ಟಿಕ್ ಟಾಕ್‌ ದೃಶ್ಯಾವಳಿಗಳು ಆಡಳಿತ ವ್ಯವಸ್ಥೆ ಗೆ ಚುರುಕುಮುಟ್ಟಿಸಿತ್ತು. ಹೀಗೆ ಸಾಮಾಜಿಕ ಸಮಸ್ಯೆಗಳಿಗೆ ಟಿಕ್‌ಟಾಕ್‌ ಮೂಲಕವೂ ಬಿಸಿಮುಟ್ಟಿಸಲು ಸಾಧ್ಯ ಎನ್ನುವುದನ್ನು ಧನರಾಜ್ ಸಾಧಿಸಿ ತೋರಿಸುತ್ತಿದ್ದಾರೆ. ಅವರ ಎಲ್ಲಾ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್ ಎನ್ನೋಣ..

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...