ಬಂಟ್ವಾಳ : ಹರಿಯಾಣ ರಾಜ್ಯದಲ್ಲಿ ನಡೆಯಲಿರುವ ಥ್ರೋಬಾಲ್ ಪಂದ್ಯಾವಳಿಗೆ ಬಂಟ್ವಾಳ ತಾಲೂಕಿನ ಭಾಗ್ಯ ಶ್ರೀ ಅವರು ಕರ್ನಾಟಕ ತಂಡಕ್ಕೆ ಆಯ್ಕೆ ಯಾಗಿದ್ದಾರೆ.

ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ನಿಯಾಗಿರುವ ಭಾಗ್ಯ ಶ್ರೀ ಅವರು ಇದೇ ತಿಂಗಳು ಅ.29 ರಿಂದ 31 ರ ವರೆಗೆ ಹರಿಯಾಣದ ಎಂ.ಡಿ.ವಿ.ವಿ ಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡದಿಂದ ಪ್ರತಿನಿಧಿ ಸಲಿದ್ದಾರೆ.
ಇವರು ಬಂಟ್ವಾಳ ತಾಲೂಕಿನ ನಿವೃತ್ತ ಎ.ಎಸ್.ಐ.ಬಾಲಕೃಷ್ಣ ಹಾಗೂ ಗಾಯತ್ರಿ ಅವರ ಪುತ್ರಿಯಾಗಿದ್ದಾಳೆ.
ರಾಜ್ಯ ಥ್ರೋಬಾಲ್ ಅಸೋಸಿಯೇಷನ್ ವತಿಯಿಂದ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಭಾಗ್ಯ ಶ್ರೀ ಯವರನ್ನು ಅಣ್ಣ ಭಾಗ್ಯ ರಾಜ್ , ಎಸ್.ವಿ.ಎಸ್.ದೇವಳ, ಸೈಂಟ್ ಆಗ್ನೆಸ್ ಕಾಲೇಜು ಹಾಗೂ ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಪದವಿ ಕಾಲೇಜಿನ ಶಿಕ್ಷಕ ವರ್ಗ ಅಭಿನಂದಿಸಿದೆ.

