Sunday, January 25, 2026

ಪರಿಹಾರ ತಿಕ್ಕುಜಿ‌ ಪೊರ್ಬುಲೆ, ಈರ್ ನೈಂಟಿ ಪರ್ದ್ ಜೆಪ್ಪುಲೆ”: ತಾಲೂಕು ಕಚೇರಿ ಸಿಬ್ಬಂದಿ ವಿರುದ್ದ ಗ್ರಾಮ ವಾಸ್ತವ್ಯದಲ್ಲಿ ದೂರು

ಬಂಟ್ವಾಳ: ಗೋಳ್ತಮಜಲು ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯದಲ್ಲಿ ಗ್ರಾಮಸ್ಥರೋರ್ವರು , ತಾಲೂಕು ಆಡಳಿತ ವಿರುದ್ಧ ಕಿಡಿಕಾರಿದ್ದು, ತಮಗೆ ಬಾರದೆ ಇರುವ ಕೊಲೆರೋಗದ ಪರಿಹಾರ ಮೊತ್ತ ಕೇಳಿದ್ದಕ್ಕೆ ತಾಲೂಕು ಕಚೇರಿಯ ಸಿಬ್ಬಂದಿಯೊಬ್ಬರು , ಹೇಳಿದ ಮಾತನ್ನು ತಹಶಿಲ್ದಾರ್ ಅವರ ಮುಂದಿಟ್ಟಿದ್ದಾರೆ.
ಕೊಲೆ ರೋಗದ ಪರಿವಾರ ಕೇಳಿರುವುದಕ್ಕೆ , ಗೋಳ್ತಮಜಲು ಗ್ರಾಮದ ಕಲಾವನ ನಿವಾಸಿ ವಲೇರಿಯನ್ ಡಿ.ಸೋಜ ಅವರಿಗೆ ತಾಲೂಕು ಕಚೇರಿ ಸಿಬ್ಬಂದಿಯೋಬ್ಬರು ” ಪರಿಹಾರ ತಿಕ್ಕುಜಿ‌ ಪೊರ್ಬುಲೆ, ಈರ್ ನೈಂಟಿ ಪರ್ದ್ ಜೆಪ್ಪುಲೆ” ( ಪರಿಹಾರ ಸಿಗುವುದಿಲ್ಲ , 90 ಹಾಕಿ ಮಲಗಿ) ಎಂದು ಹೀಯಾಳಿಸಿರುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ತನ್ನನ್ನು ಹೀಯಾಳಿಸಿರುವ ವ್ಯಕ್ತಿ ಇದೇ ವೇದಿಕೆಯಲ್ಲಿ ಇದ್ದಾರೆ, ಆದರೆ ನಾನು ಹೆಸರು ಈ ಸಂದರ್ಭದಲ್ಲಿ ಹೇಳುವುದಿಲ್ಲ
ಎಂದು ಅವರು ಗಟ್ಟಿಸ್ವರದಲ್ಲಿ ತಾಲೂಕು‌ಕಚೇರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಹಶಿಲ್ದಾರ್ ಸ್ಮಿತಾರಾಮು ಅವರು ಮೆತ್ತಗೆ ಮಾತನಾಡಿ ಎಂದು ಹೇಳಿದ್ದು ನಿಮ್ಮ ಸಮಸ್ಯೆ ಯನ್ನು ಹೇಳಿ, ಹಿಂದೆ ಆದ ಘಟನೆಯನ್ನು ಕೆದಕಬೇಡಿ ಎಂದಿದ್ದಾರೆ.
ಬಳಿಕ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಭರವಸೆ ನೀಡಿದರು.
ಅದೇ ವ್ಯಕ್ತಿ ಇನ್ನೊಂದು ‌ಸಮಸ್ಯೆ ಹೇಳಿದ್ದು, ತೋಡಿನ ಬಳಿಯ ಪರಂಬೋಕು ಸ್ಥಳಕ್ಕೆ ಮಣ್ಣು ತುಂಬಿಸಿರುವುದರಿಂದ ತೋಡಿನ‌ನೀರು ತನ್ನ ತೋಟಕ್ಕೆ ಬಿದ್ದು ನಷ್ಟ ‌ವುಂಟಾಗಿದೆ, ಈ ಕುರಿತು ಪಿ.ಡಿ.ಒ.ಅವರ ಗಮನಕ್ಕೆ ತಂದರೂ‌ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ಇದರ ಬಗ್ಗೆ ವಿಜಯಶಂಕರ್ ಅವರಲ್ಲಿ ತಹಶೀಲ್ದಾರ್ ಮಾಹಿತಿ ಕೇಳಿದ್ದು, ಸಂಬಂಧ ಪಟ್ಟ ವ್ಯಕ್ತಿ ಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.
ಗ್ರಾಮವಾಸ್ತವ್ಯದಲ್ಲಿ ಗರಿಷ್ಠ ಮನವಿಗಳು ಕಂದಾಯ ಇಲಾಖೆಗೆ ಬಂದಿದ್ದು, ಹಾಗಾದರೆ ಬರಿ ಗ್ರಾಮ ವಾಸ್ತವ್ಯ ದಲ್ಲಿ ಮಾತ್ರ ಮನವಿ , ದೂರು ನೀಡುವುದಾದರೆ ಉಳಿದ ದಿನಗಳಲ್ಲಿ ತಾಲೂಕು ‌ಕಚೇರಿಯವರು ಏನು ಮಾಡುತ್ತಿದ್ದಾರೆ, ? ಎಂದು ಸಾರ್ವಜನಿಕ ರು ಪ್ರಶ್ನೆ ಮಾಡುವಂತಾಗಿದೆ.

**ಗ್ರಾಮ ವಾಸ್ತವ್ಯಕ್ಕೆ ಕಲೆಕ್ಷನ್ ಯಾಕೆ.*
ಹಿಂದೆ ವೀರಕಂಬದಲ್ಲಿ ನಡೆದ ಗ್ರಾಮ ವಾಸ್ತವ್ಯ ದಲ್ಲಿ ದೇಣೆಗೆ ಸಂಗ್ರಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸ್ವತಃ ಐದು ಸಾವಿರ ರೂ ನೀಡಿರುವ ವ್ಯಕ್ತಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಒಬ್ಬ ರಿಂದಲೇ ಇಷ್ಡು ಮೊತ್ತ ಸಂಗ್ರಹವಾಗಿದ್ದರೆ, ಗ್ರಾಮದ ಇತರರಿಂದ ಎಷ್ಡು ಸಂಗ್ರಹವಾಗಿರಬಹುದು ಎಂಬುದನ್ನು ದೇವರೆ ಬಲ್ಲ….
ಈ ರೀತಿ ಜನರಿಂದ ಹಣ ವಸೂಲಿ ಮಾಡಿ ಗ್ರಾಮ ವಾಸ್ತವ್ಯ ಯಾವ ಪುರುಷಾರ್ಥ ಕ್ಕೆ ಮಾಡುತ್ತಾರೆ ಎಂದು ತಾಲೂಕು ಕಚೇರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಜೊತೆಗೆ ಗ್ರಾಮವಾಸ್ತವ್ಯದ ಖರ್ಚು ಎಷ್ಟು? ಅದರ ವೆಚ್ಚವನ್ನು ಯಾವ ಮೂಲದಿಂದ ಭರಿಸಬೇಕು ಎಂಬುದನ್ನು ಜಿಲ್ಲಾಧಿಕಾರಿಗಳು ಬಹಿರಂಗ ಪಡಿಸಬೇಕು ಎಂದು ಸಾರ್ವಜನಿಕ ರು ಆಗ್ರಹಿಸಿದ್ದಾರೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...