ಬಂಟ್ವಾಳ: ಎಸ್.ವಿ.ಎಸ್.ಇಂಗ್ಲೀಷ್ ಮಾಧ್ಯಮ ಸ್ಕೂಲ್ ವಿದ್ಯಾಗಿರಿ ಬಂಟ್ವಾಳ ಇಲ್ಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತು ಕೆಸರು ಗದ್ದೆ ಸ್ಪರ್ಧೆ ವಿದ್ಯಾಗಿರಿ ಗದ್ದೆಯಲ್ಲಿ ನಡೆಯಿತು.

ಬಂಟ್ವಾಳ ತಹಶಿಲ್ದಾರರಾದ ರಶ್ಮಿ ಅವರು ತೆಂಗಿನ ಗರಿಯನ್ನು ಅರಳಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ದ ಅವರು
ಗ್ರಾಮೀಣ ಭಾಗದ ಪ್ರತಿಯೊಂದು ಕ್ರೀಡೆ ಗಳು ಕೂಡಾ ಆರೋಗ್ಯ ವನ್ನು ಕಾಪಾಡುತ್ತದೆ.
ಪ್ರಕೃತಿಯ ಜೊತೆ ಯಲ್ಲಿ ನಾವು ವಿರೋಧ ವ್ಯಕ್ತಪಡಿಸಿದೆ ಹೊಂದಿಕೊಂಡು
ಹೋದಾಗ ಆರೋಗ್ಯ ವಂತರಾಗಿ ಬದುಕು ಸಾಗಿಸಲು ಸಹಾಯ ವಾಗುತ್ತದೆ ಎಂದು ಅವರು ಹೇಳಿದರು.
ಆಧುನಿಕತೆಯ ಮಧ್ಯೆ ನಾವು ಹಳೆಯ ಗ್ರಾಮೀಣ ಬದುಕು ಮರೆತಿದ್ದೇವೆ.
ನಮ್ಮ ಹಿರಿಯರು ಆರೋಗ್ಯ ವಾಗಿ ಸದೃಢ ವಾಗಿರಲು ಕೃಷಿ ಬದುಕು ಕಾರಣವಾಗಿದೆ.
ನಾವು ಹಿಂದಿನ ಕಾಲದಲ್ಲಿ ಆದುನಿಕ ಕೃಷಿಗೆ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸುವ ಎಂದು ಅವರು ಹೇಳಿದರು.
ಮಕ್ಕಳಿಗೆ ಕೃಷಿಯ ಮೇಲೆ ಪ್ರೀತಿ ಬರಬೇಕು, ಪಾಠದ ಜೊತೆಯಲ್ಲಿ ಗ್ರಾಮೀಣ ಬದುಕಿನ ಸವಿಯನ್ನು ಸವಿಯಿರಿ ಎಂಬ ಕಿವಿ ಮಾತು ಹೇಳಿದರು.
ಇವುಗಳ ಜೊತೆಗೆ ಗುರಿ ಸರಿಯಾಗಿರಲಿ ಎಂಬ ಮಾತನ್ನು ಹೇಳಿದರು.
ಪಾಠದ ಜೊತೆಯಲ್ಲಿ ಪಠ್ಯೇತರ ವಿಷಯ ಕ್ಕೆ ವಿಶೇಷ ಒತ್ತು ನೀಡುವ ಈ ಶಾಲೆ, ಪ್ರಥಮವಾಗಿ ತುಳುನಾಡಿನ ಆಚಾರ ವಿಚಾರಗಳನ್ನು ಬಿಂಬಿಸುವ ಜೊತೆಗೆ ಕೃಷಿ ಯ ಬಗ್ಗೆ ಮಕ್ಕಳಿಗೆ ಅರಿವು ಜ್ಞಾನ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯ ಕ್ರಮ ಏರ್ಪಡಿಸಲಾಗಿದೆ.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಂದಾಯ ನಿರೀಕ್ಷಕ ನವೀನ್, ಶಿಕ್ಷಕ ರಕ್ಷಕ ಸಂಘದ ಆಧ್ಯಕ್ಷ ಶ್ರೀಧರ ಬಿ, ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ, ಶಿಕ್ಷಕ ರಕ್ಷಕ ಸಂಘದ ಖಜಾಂಚಿ ಹರಿಶ್ಚಂದ್ರ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಸ್ವಾಗತಿಸಿ, ಶಿಕ್ಷಕ ಹರಿಪ್ರಸಾದ್ ವಂದಿಸಿದರು.
ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ನೇಜಿ ನೆಡುವ ಕಾರ್ಯ ಕ್ರಮಕ್ಕೆ ಅತಿಥಿಗಳಿಂದ ಗದ್ದೆಗೆ ಹಾಲು ಹಾಕುವ ಮೂಲಕ ಚಾಲನೆ ನೀಡಿದರು.