ಬಂಟ್ವಾಳ ಮಿನಿವಿಧಾನಸೌಧದಲ್ಲಿ ಬ್ರೋಕರ್ ಹಾವಳಿಗೆ ಕಡಿವಾಣ ಹಾಕಿ ಭ್ರಷ್ಟಾಚಾರ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇರಿಸಿದ ಬಂಟ್ವಾಳ ತಹಶಿಲ್ದಾರ್ ರಶ್ಮಿ

ಬಂಟ್ವಾಳ: ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಆಕೆ ಮನಸ್ಸು ಮಾಡಿದರೆ ವ್ಯವಸ್ಥೆಯಲ್ಲಿ ಪರಿವರ್ತನೆಯ ಕ್ರಾಂತಿಯನ್ನೇ ಮಾಡುವಳು ಅನ್ನುವುದಕ್ಕೆ ಉದಾಹರಣೆ ಎಂಬಂತೆ ಬಂಟ್ವಾಳ ತಹಾಶಿಲ್ದಾರ್ ರಶ್ಮಿಯವರು ಕಾರ್ಯನಿರ್ವಹಿಸುತ್ತಾರೆ.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಾ ಬ್ರೋಕರ್ ಹಾವಳಿಯಿಂದ ಭ್ರಷ್ಟಾಚಾರದ ತಾಂಡವವಾಡುತ್ತಿದ ಮಿನಿ ವಿಧಾನಸೌಧ ಹಲವಾರು ವರ್ಷಗಳಿಂದ ಪಹಣಿ ಪತ್ರಗಳ ವಿತರಣೆಯಿಂದ ಮೊದಲ್ಗೊಂಡು ಜನಸಾಮಾನ್ಯರ ಅವಶ್ಯಕ ಕೆಲಸಗಳಿಗೆ ಜನ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು ಮಧ್ಯವರ್ತಿಗಳು ಅಪರೇಟರ್ ಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದರು ಇ ದೀಗ ತಹಶಿಲ್ದಾರರ ದಿಟ್ಟ ಕ್ರಮಗಳಿಂದ ಮಿನಿ ವಿಧಾನಸೌದದಲ್ಲಿ ಮದ್ಯವರ್ತಿಗಳ ಹಾವಳಿಗಳು ನಿಯಂತ್ರಣವಾಗಿದೆ.
ಜನಸಾಮಾನ್ಯರ ಸಮಸ್ಯೆಗಳು ನಿವಾರಣೆಯಾಗುತ್ತಿದೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವ ಬಂಟ್ವಾಳ ತಹಶಿಲ್ದಾರರ ದಿಟ್ಟ ಹೆಜ್ಜೆ ಅಪಾರ ಶ್ಲಾಘನೆ ಒಳಾಗಾಗಿದೆ.
ಸರಿಯಾಯಿತು ಲಿಪ್ಟ್: ಮಿನಿ ವಿಧಾನ ಸೌಧದ ಉದ್ಘಾಟನೆ ಯಾದ ಕೆಲವೆ ಸಮಯದಲ್ಲಿ ಸಾರ್ವಜನಿಕ ರ ಉಪಯೋಕ್ಕಾಗಿ ಮಹಡಿಗಳಿಗೆ ತೆರಳಲು ಮಾಡಲಾಗಿದ್ದ ಲಿಪ್ಟ್ ಕೈ ಕೊಟ್ಟಿತ್ತು.
ಅಂಗವಿಕಲ ರ ಸಹಿತ ಹಿರಿಯ ವ್ಯಕ್ತಿಗಳು ಮೇಲಿನ ಮಹಡಿಗೆ ಹೊರಳಾಡಿಕೊಂಡು ಮೆಟ್ಟಲು ಗಳನ್ನು ಹತ್ತಿ ತೆರಳುವ ದೃಶ್ಯ ಎಲ್ಲರಿಗೂ ಬೇಸರ ತಂದಿತ್ತು.
ಈ ಬಗ್ಗೆ ದೂರುಗಳ ಮೇಲೆ ದೂರುಗಳು ಸಾರ್ವಜಿನಕರಿಂದ ಹೋದರೂ ಯಾವುದೇ ಪ್ರಯೋಜನ ಸಿಕ್ಕಿರಿಲಿಲ್ಲ. ಆದರೆ ಅದ್ಯಾವುದೋ ಭಾಗ್ಯ ಗೊತ್ತಿಲ್ಲ, ಬಂಟ್ವಾಳ ಕ್ಕೆ ಹೊಸದಾಗಿ ಬಂದ ಕೆ.ಎ.ಎಸ್.ಗ್ರೇಡ್ ತಹಶೀಲ್ದಾರ್ ರಶ್ಮಿ ಅವರು ಇಲ್ಲಿನ ಒಂದೊಂದು ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಂಡರು , ಯಶಸ್ವಿಯಾದರು.
ಸರಿಯಿಲ್ಲದ ಲಿಪ್ಟ್ ಸರಿಯಾಯಿತು. ಜನರು ಖುಷಿಯಿಂದ ಲಿಪ್ಟ್ ಮೂಲಕ ತೆರಳುವಂತಾಯಿತು.
ಅಟಲ್ ಜೀ ಜನ ಸ್ನೇಹಿ ಕೇಂದ್ರ: ಆಧಾರ್ ಕಾರ್ಡ್ ಸಹಿತ ಅನೇಕ ವಿಚಾರಗಳಿಗೆ ಮಿನಿವಿಧಾನ ಸೌಧದ ಕಚೇರಿಯಲ್ಲಿ ಸರಿಯಾದ ವ್ಯವಸ್ಥೆ ಗಳಿರಲಿಲ್ಲ. ಸಾರ್ವಜನಿಕ ರು ಮಿನಿವಿಧಾನ ಸೌಧದ ಸುತ್ತ ಕ್ಯೂ ನಿಂತು ಗಲಾಟೆ ಮಾಡುವುದು ಮಾಮೂಲಿಯಾಗಿತ್ತು, ಈ ಬಗ್ಗೆಯೂ ವಿಶೇಷ ಗಮನ ಹರಿಸಿದ ರಶ್ಮಿ ಅವರು ಪ್ರತ್ಯೇಕ ವಾಗಿ ಅಟಲ್ ಜನಸ್ನೇಹಿ ಕೇಂದ್ರ ವನ್ನು ತೆರದು ಅ ಮೂಲಕ ಸಾರ್ವಜನಿಕರ ಕೆಲಸಕ್ಕಾಗಿ ಬಿಟ್ಟುಕೊಡಲಾಗಿದೆ, ಕೆಲ ದಿನಗಳಿಂದ ಯಾವುದೇ ಗೊಂದಲ ವಿಲ್ಲದೆ ವ್ಯವಹಾರಗಳು ನಡೆಯುತ್ತಿದೆ.
ಸುಣ್ಣ ಬಣ್ಷ ಬಳಿಯಲಾಗಿದ್ದು ಸ್ವಚ್ಚತೆಗೆ ಹೆಚ್ಚು ಆಧ್ಯತೆಯನ್ನು ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಚಿವರ ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತಾ ಮಿನಿವಿಧಾನ ಸೌಧ ಕಚೇರಿ ಗೆ ಅಗಮಿಸುವ ಪ್ರತಿಯೊಬ್ಬರು ತಮ್ಮ ಮನೆಯಂತೆ ನೋಡಬೇಕು, ಅದೇ ರೀತಿಯಲ್ಲಿ ಕಚೇರಿಯ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಹೇಳಿದ ಮಾತು ಎಲ್ಲರನ್ನು ಮುಟ್ಟುವಂತೆ ಮಾಡಿತ್ತು.
ಬ್ರೋಕರ್ ಗಳಿಂದ ತುಂಬಿದ್ದ ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಯ ಅವಶ್ಯಕತೆ ಇತ್ತು. ಅ ಕೆಲಸ ಮೇಡಮ್ ಸಾಹೇಬರಿಂದ ಅಗಿದೆ, ಇನ್ನು ಅಗಬೇಕಾಗಿದೆ.
ಕಚೇರಿಯ ಅನೇಕ ಪೈಲ್ ಗಳು ಕಾಣೆಯಾಗುತ್ತಿತ್ತು, ಅದಕ್ಕಾಗಿ ಹೋರಾಟ ಗಳೇ ನಡೆದ ದಿನಗಳು ಇವೆ.
ಬ್ರೋಕರ್ ಗಳಲ್ಲಿ ಪ್ರತ್ಯೇಕ ಸೀಲ್ ಪ್ಯಾಡ್ ಗಳು ಇವೆ, ಇದೆಲ್ಲದರ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಗಮನಿಸಿ ಜನ ಸಾಮಾನ್ಯ ರಿಗೆ ನ್ಯಾಯ ಒದಗಿಸುವ ಕೆಲಸ ಮಾಡುವ ಆಸೆಯಿಂದ ನಿಮ್ಮ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಭರವಸೆ ಈಡೇರಿಸುವ
ವಿಶ್ವಾಸ ಇದೆ.
ಭ್ರಷ್ಟ ಮುಕ್ತ ಭಾರತಿ ವಿಶ್ವಕ್ಕವಳೇ ಸಾರಥಿ
ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟ ನಿಮಗೆ ಅಭಿನಂದನೆಗಳು