ವಿಟ್ಲ: ತೋಟಗಾರಿಕೆ ಇಲಾಖೆ, ಬಂಟ್ವಾಳ ಮಹಿಳಾ ಮಂಡಲ ಒಕ್ಕೂಟ. ಹಾಗೂ ಮಹಿಳಾ ಮಂಡಲ ವಿಟ್ಲ ಇದರ ಆಶ್ರಯದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಇತರ ಮಹಿಳಾ ಸಂಘಟನೆಯ ಸದಸ್ಯರಿಗೆ ಅಣಬೆ ಬೇಸಾಯ ಹಾಗೂ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮವು ವಿಟ್ಲದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಲಯದ ಸಭಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಉದ್ಘಾಟಿಸಿದರು. ಉಪಾಧ್ಯಕ್ಷ ಅಬ್ಬಾಸ್ ಆಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ. ಅಧ್ಯಕ್ಷತೆ ವಹಿಸಿದ್ದರು. ಅಣಬೆ ಬೇಸಾಯ ವಿಭಾಗದ ಪಾಂಡುರಂಗ, ಬಂಟ್ವಾಳ ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿದೇವಿ, ಪಟ್ಟಣ ಪಂಚಾಯಿತಿ ಸದಸ್ಯೆ ಉಷಾ ಕೆ, ಜಾನ್ ಡಿ’ಸೋಜಾ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಾ ಎಂ. ರೈ ವೇದಿಕೆಯಲ್ಲಿದ್ದರು.
ದೇವಕಿ ಆಶಯಗೀತೆ ಹಾಡಿದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ದಿನೇಶ್ ಪ್ರಸ್ತಾವಿಸಿದರು. ಬಾಲಕೃಷ್ಣ ಭಟ್ ಸ್ವಾಗತಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ ಪಿ.ಬಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಸಹಾಯ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
