ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.

ಬೆಳಿಗ್ಗೆ ಗಣಹೋಮದ ಬಳಿಕ ಉದಯ ಪೂಜೆ, ನರಸಿಂಹ ಮಂಡಲ ಪೂಜೆ, ತುಲಾಭಾರ ಸೇವೆ ಹಾಗೂ ಇನ್ನಿತರ ವೈದಿಕ ಕಾರ್ಯಕ್ರಮಗಳು ನಡೆದವು.
ಮಧ್ಯಾಹ್ನ ಶ್ರೀ ದೇವಿಯ ಬಲಿ ಉತ್ಸವ, ದರ್ಶನ ಬಲಿ, ಪಲ್ಲಕ್ಕಿ ಉತ್ಸವ, ಮಹಾಪೂಜೆ ನೆರವೇರಿತು.
ಸಂಜೆ ಶ್ರೀ ಆಂಜನೇಯ ಸ್ವಾಮಿಗೆ ಮಹಾಪೂಜೆ, ದೇವರ ಉತ್ಸವ ಸೇವೆ ನಡೆಯಿತು. ರಾತ್ರಿ ದೇವಿಯ ಬಲಿ ಉತ್ಸವ, ದರ್ಶನ ಬಲಿ, ಪಲ್ಲಕ್ಕಿ ಉತ್ಸವ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ಕಲಾವಿದರಿಂದ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಬಳಿಕ ಸಿರಿ ಕುಮಾರ್ ಸೇವೆ ನಡೆಯಿತು. ನಂತರ ಶ್ರೀ ರಕ್ತೇಶ್ವರಿ ದೈವಕ್ಕೆ ನೇಮೋತ್ಸವ ನಡೆಯಿತು.
