ವಿಟ್ಲ: ವಿಟ್ಲ ಘಟಕ ವತಿಯಿಂದ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀಶಕ್ತಿ ಮಹಿಳಾ ಮಂಡಳಿ ಸದಸ್ಯರಿಗೆ ’ಮಹಿಳಾ ಸಬಲೀಕರಣ’ ತರಬೇತಿ ಕಾರ್‍ಯಕ್ರಮವು ನಡೆಯಿತು.
ಸಭಾಧ್ಯಕ್ಷತೆಯನ್ನು ಅಧ್ಯಕ್ಷೆ ಮಲ್ಲಿಕಾ ವಹಿಸಿದ್ದರು. ಅಧ್ಯಕ್ಷ ಬಾಲಕೃಷ್ಣ ವಿಟ್ಲ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಲಯ ತರಬೇತುದಾರರಾದ ರಮೇಶ್ ಭಾಗವಹಿಸಿದ್ದರು.
ಮೇಗಿನಪೇಟೆ ಅಂಗನವಾಡಿ ಶಿಕ್ಷಕಿ ಸರಸ್ವತಿ, ಸ್ತ್ರೀಶಕ್ತಿ ಅಧ್ಯಕ್ಷೆ ಅನಿತಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ನಾಗವೇಣಿ ಮತ್ತು ಸದಸ್ಯರು ಭಾಗವಹಿಸಿದ್ದರು. ಪೂರ್ವಾಧ್ಯಕ್ಷರಾದ ಭಾಸ್ಕರ್ ಶೆಟ್ಟಿ, ಲೂಯಿಸ್, ರೋಟರಿ ಕ್ಲಬ್ ನ ಪಿಟಿಶಾ ಉಪಸ್ಥಿತರಿದ್ದರು. ಸದಸ್ಯರಾದ ಶಿವಾನಿ. ಶೆಟ್ಟಿ, ಮಮತಾ ಸಂಜೀವ, ಶಾಂತಿ ಪಾಯಸ್ ನಾನಾ ಜವಾಬ್ದಾರಿಗಳನ್ನು ನೆರವೇರಿಸಿದರು.
