ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೌಶಿಕ್ ಉದಾಹರಣೆ. ಇವರಿಗೆ ಕಿತ್ತುತಿನ್ನುವ ಬಡತನ, ಸಣ್ಣ ಗುಡಿಸಲು, ಜೊತೆಗೆ ಈತನಿಗೆ ಹುಟ್ಟಿನಿಂದಲೇ ಎರಡು ಕೈಗಳಿಲ್ಲ. ಆದರೂ ಈತನ ಓದು,ಬರಹ,ಇತರ ಸಾಧನೆಗೆ ಬಡತನ ಅಥವಾ ವಿಕಲಾಂಗತೆ ಅಡ್ಡಿಯಾಗಿಲ್ಲ. ಸಾಧನೆಗೆ ಛಲ ಇದ್ದರೆ ಸಾಕು ಎಂದು ಈತ ತೋರಿಸಿದ ಹಾಗೆ ಇತರರಿಗೆ ಮಾದರಿಯಾಗಿದ್ದಾನೆ. ಈತನಿಗೆ ತಂದೆ ರಾಜೇಶ್ ಆಚಾರ್ಯ, ತಾಯಿ ಜಲಜಾಕ್ಷಿ, ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ನ ಸಹಕಾರ ಇದ್ದೇ ಇದೆ.

ಬಂಟ್ವಾಳ:ಕಾಲಿನ ಬೆರಳಿ ಮೂಲಕ ಪರೀಕ್ಷೆ ಬರೆದ ಬಂಟ್ವಾಳದ ವಿದ್ಯಾರ್ಥಿಯ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸುರೇಶ್ ಕುಮಾರ್ ಟ್ವಿಟರ್ ನಲ್ಲಿ ಏನಿದೆ ನೋಡಿ:
ಬಂಟ್ವಾಳ ಎಸ್.ವಿ.ಎಸ್.ಪ್ರೌಡ ಶಾಲೆಯಲ್ಲಿ ಪರೀಕ್ಷೆ ಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳು ಗಳ ಮೂಲಕ ಮೂಲಕವೇ ಉತ್ತರ ಬರೆದ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸಿತ್ತಾರೆ .ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂಬ ಟ್ವಿಟ್ ಮಾಡಿ ಕೌಶಿಕ್ ನಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.


ಬಹುಮುಖ ಪ್ರತಿಭೆ ಕೌಶಿಕ್:
ಬಂಟ್ವಾಳ ದ ಕಂಚಿಕಾರ ಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ಎರಡನೇ ಮಗ ಕೌಶಿಕ್. ಈತ ಹುಟ್ಟಿನಿಂದಲೇ ಎರಡು ಕೈಗಳಿಲ್ಲದೆ ಬದುಕಿಗೆ ಅಡಿಯಿಟ್ಟವನು. ಆದರೂ ಯಾವುದೇ ಅಂಜಿಕೆಯಿಲ್ಲದೆ ಯಾರಿಗೂ ಕಡಿಮೆ ಯಿಲ್ಲದ ರೀತಿ ಯಲ್ಲಿ ಈತ ಪ್ರತಿಭಾನ್ವಿತ ಬಾಲಕ. ಬಂಟ್ವಾಳ ಎಸ್.ವಿ.ಎಸ್.ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿ.

ಪಾಠದ ಜೊತೆಯ ಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಬಾಲಕ ಎತ್ತಿದ ಕೈ. ಈತ ಒಂದನೇ ತರಗತಿಯಿಂದಲೇ ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆಯಲು ಆರಂಬಿಸಿದ ಕಾರಣ ಇಷ್ಟು ಎರಡು ಕೈಗಳಿಲ್ಲದ ಕೌಶಿಕ್ ನಿಗೆ ಆತನ ಕಾಲುಗಳೇ ಕೈಯಾಗಿತ್ತು.
ನಿನ್ನೆ ಆರಂಭವಾದ ಎಸ್.ಎಸ್.ಎಲ್.ಸಿ.ಪರೀಕ್ಷೆ ಯನ್ನು ಕಾಲಿನಿಂದ ಬರೆದು ಮೆಚ್ಚುಗೆ ಪಡೆದ ವಿದ್ಯಾರ್ಥಿಯಾಗಿದ್ದಾನೆ. ಓದಿನ ಜೊತೆ ಕೌಶಿಕ್ ಡ್ಯಾನ್ಸ್, ಡ್ರಾಯಿಂಗ್, ಈಜು, ಕ್ರಿಕೆಟ್ ಹೀಗೆ ಎಲ್ಲ ಆಟದಲ್ಲಿಯೂ ಎತ್ತಿದ ಕೈ. ಈತನಿಗೆ ಆಟೋಟಗಳಲ್ಲಿ ಅನೇಕ ಬಹುಮಾನಗಳು ದೊರೆತಿವೆ.

