Monday, January 26, 2026

ವಿಟ್ಲ: ತಾಳಮದ್ದಳೆ ಕೂಟ ಉದ್ಘಾಟನೆ

ವಿಟ್ಲ: ವಿಟ್ಲದ ಶ್ರೀ ಭಗವತೀ ದೇವಸ್ಥಾನದಲ್ಲಿ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ’ಅಭ್ಯಾಸೀ ಯಕ್ಷಗಾನ ತಾಳಮದ್ದಳೆ’ ಕೂಟವನ್ನು ಯಕ್ಷಭಾರತದ ಅಧ್ಯಕ್ಷ ಸಂಜೀವ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಭಟ್ ‘ಕಳೆದ 9 ವರ್ಷಗಳಿಂದ ಯಕ್ಷ ಶಿಕ್ಷಣ ಧ್ಯೇಯವುಳ್ಳ ಯಕ್ಷ ಸಿಂಧೂರ ಸಂಘಟನೆಯ ಮೂಲಕ ಹಿಮ್ಮೇಳ, ಮುಮ್ಮೇಳದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ತರಬೇತಿ ಪಡೆದ ಮೂರು ಮಂದಿ ವಿದ್ಯಾರ್ಥಿಗಳದೀಗಾಗಲೇ ರಂಗ ಪ್ರವೇಶ ಮಾಡಿದ್ದಾರೆ.
ಭಗವತಿ ದೇವಸ್ಥಾನದ ಉಸ್ತುವಾರಿ ಕೇಶವ ವಿಟ್ಲ ಹಾಗೂ ನಾರಾಯಣ ಕಾಯರ್‌ಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಕಲಾವಿದರಿಂದ ’ಪಾರ್ಥ ಸಾರಥ್ಯ’ ತಾಳಮದ್ದಳೆ ನಡೆಯಿತು. ಭಾಗವತಿಕೆಯಲ್ಲಿ ಪ್ರಭಾ ಹರೀಶ್ ಬಾಳೆಕಾನ ಮತ್ತು ಧನ್ಯಶ್ರೀ ಚಣಿಲ, ಚೆಂಡೆ ಮದ್ದಳೆಯಲ್ಲಿ ಅವಿನಾಶ್ ಚಣಿಲ, ಕೃಷ್ಣಪ್ರಸಾದ್ ದಿವಾಣ ಮತ್ತು ಅಕ್ಷರಶ್ಯಾಮ ಮಳಿ, ಮುಮ್ಮೇಳದಲ್ಲಿ ಚಣಿಲ ಸುಬ್ರಹ್ಮಣ್ಯ ಭಟ್, ಎಲ್ ಎನ್ ಭಟ್ ಮಳಿ, ಪೂರ್ಲಪ್ಪಾಡಿ ಈಶ್ವರ ಭಟ್, ಮಂಜುನಾಥ ಆಚಾರ್ಯ, ರಾಧಾಕೃಷ್ಣ ವೈ, ಸಂಕಪ್ಪ ಗೌಡ, ಸೀತಾಲಕ್ಷ್ಮಿ ವರ್ಮ, ಅಭಿಲಾಷ್ ಮತ್ತು ಶ್ರೀಕೃಷ್ಣ ಸಹಕರಿಸಿದರು.

 

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...