ಬಂಟ್ವಾಳ: ಲಾಕ್ ಡೌನ್ ಸಮಯದಲ್ಲಿ ಕರ್ತವ್ಯದಲ್ಲಿ ಇರುವ ಬಂಟ್ವಾಳ ಪೊಲೀಸರಿಗೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ ) ಇದರ ಅಧ್ಯಕ್ಷ ಅರ್ಜುನ್ ಬಂಡಾರ್ಕರ ಮತ್ತು ವಿ.ಎನ್.ಆರ್.ಗೋಲ್ಡ್ ಮಾಲೀಕ ನಾಗೇಂದ್ರ ಬಾಳಿಗ ಹಾಗೂ ಗಿರೀಶ್ ಪೈರವರು ಅವರು ಸಂಜೆ ಚಾ ಮತ್ತು ತಿಂಡಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಜೆ ಹೊತ್ತು ಯಾವುದೇ ಹೋಟೆಲ್ ಓಪನ್ ಇಲ್ಲದ ಕಾರಣ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಸಂಜೆ ಚಾ ತಿಂಡಿಗೆ ತುಂಬಾ ಕಷ್ಟವಾಗುತಿತ್ತು.
ಈ ಸಮಸ್ಯೆಯನ್ನು ಅರಿತ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ ) ಇದರ ಅಧ್ಯಕ್ಷರಾದ ಅರ್ಜುನ್ ಬಂಡಾರ್ಕರ ಮತ್ತು ವಿ.ಎನ್.ಆರ್.ಗೋಲ್ಡ್ ಮಾಲೀಕ ನಾಗೇಂದ್ರ ಬಾಳಿಗ ಹಾಗೂ ಗಿರೀಶ್ ಪೈರವರು ಅವರು ಕೂಡಲೇ ಸ್ಪಂದಿಸಿ ಕಳೆದ 6 ದಿನದಿಂದ ಪ್ರತಿದಿನ ಸಾಯಂಕಾಲ ಬಂಟ್ವಾಳ ವೃತ್ತ ವ್ಯಾಪ್ತಿಯ ವಿವಿಧ ಸ್ಥಳ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಠಾಣೆಯ ಸುಮಾರು 100 ಪೊಲೀಸ್ ಸಿಬ್ಬಂದಿಗಳಿಗೆ ಸಂಜೆ ಚಾ ಹಾಗೂ ತಿಂಡಿಯ ವ್ಯವಸ್ಥೆ ಮಾಡಿರುತ್ತಾರೆ.
ಅಲ್ಲದೆ ಈ ವ್ಯವಸ್ಥೆ ಲಾಕ್ಡೌನ್ ಮುಗಿಯುವ ವರೆಗೂ ಮುಂದುವರಿಸುವುದಾಗಿ ತಿಳಿಸಿರುತ್ತಾರೆ. ಇವರಿಗೆ ಬಂಟ್ವಾಳ ವೃತ್ತದ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಧನ್ಯವಾದ ತಿಳಿಸಿದ್ದಾರೆ.
