ವಿಟ್ಲ: ಗ್ರಾಮಸ್ವಚ್ಛತೆಯ ಮೂಲಕ ರಾಷ್ಟ್ರದ ಸ್ವಚ್ಛತೆ ಸಾಧ್ಯ ಇದರಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕುಳಾಲು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ಆಚಾರ್‍ಯ ಹೇಳಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮಂಕುಡೆ ಘಟ ಸಮಿತಿ ಮತ್ತು ಕೊಳ್ನಾಡು ಗ್ರಾಮಸಮಿತಿ ವತಿಯಿಂದ ಆಯೋಜಿಸಲಾದ ಕೊಳ್ನಾಡು ಗ್ರಾಮ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಮಂಕುಡೆ ಕುಡ್ತಮುಗೇರು ಹಳೇ ವಿದ್ಯಾರ್ಥಿ ಯುವಕ ಮಂಡಲದ ಸಂಚಾಲಕ ರಮೇಶ್, ಘಟ ಸಮಿತಿ ಅಧ್ಯಕ್ಷರಾದ ರಾಮಣ್ಣ ಮೇಸ್ತ್ರಿ, ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಧರ್ ಪೂಂಜ, ಪ್ರಗತಿಪರ ಕೃಷಿಕರಾದ ರಾಜಾರಾಮ ಹೆಗ್ಡೆ, ಬಿಜೆಪಿ ಯುವ ಮೊರ್ಚಾದ ಕಾರ್‍ಯದರ್ಶಿಗಳಾದ ಜಯರಾಮ ನಾಯ್ಕ ಕುಂಟ್ರಕಳ, ಗ್ರಾಮ ಪಂಚಾಯಿತಿ ಸದಸ್ಯರಾದ ವೇದಾವತಿ ರೋಹಿನಾಥ್ ಪೂಜಾರಿ, ಸಂಘಟನಾ ಕಾರ್‍ಯದರ್ಶಿ ಮನೀಷ್, ಉಪಾಧ್ಯಕ್ಷರಾದ ಪ್ರೀತ ಪಡಾರು ಉಪಸ್ಥಿತರಿದ್ದರು.
ಮಂಕುಡೆ ಹಳೇ ವಿದ್ಯಾರ್ಥಿ ಯುವಕ ಮಂಡಲ ಅಧ್ಯಕ್ಷ ವೇಣುಗೋಪಾಲ ಆಚಾರ್‍ಯ ಸ್ವಾಗತಿಸಿದರು. ಗ್ರಾಮಸಮಿತಿ ಪ್ರಧಾನ ಕಾರ್‍ಯದರ್ಶಿ ಪರಮೇಶ್ವರ ಆಚಾರ್‍ಯ ವಂದಿಸಿದರು. ಘಟ ಸಮಿತಿಯ ಕಾರ್‍ಯದರ್ಶಿ ರೋಹಿನಾಥ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸೇವಾದೀಕ್ಷಿತರಾದ ವಾರಿಜ, ರಾಧಾಕೃಷ್ಣ, ಸಂಘದ ಸದಸ್ಯರು, ಘಟ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.

ಒಡಿಯೂರು ಶ್ರೀಗಳ ಜನ್ಮದಿನೋತ್ಸವ: ಪಿಲಾತಬೆಟ್ಟು ಗ್ರಾಮದಲ್ಲಿ ಸ್ವಚ್ಚತೆ
ವಿಟ್ಲ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪಿಲಾತಬೆಟ್ಟು ಘಟ ಸಮಿತಿ ವತಿಯಿಂದ ಮುರುಘೇಂದ್ರ ಸಭಾಭವನದ ಮೈದಾನದಲ್ಲಿ ಸ್ವಚ್ಛತಾ ಕಾರ್‍ಯಕ್ರಮ ನಡೆಸಲಾಯಿತು. ಪಿಲಾತಬೆಟ್ಟು ಗ್ರಾಮಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮ್ಮಂಗಿಲ, ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷರಾದ ಉದಯ ಕುಮಾರ್, ವನಿತ ಸಮಾಜದ ಅಧ್ಯಕ್ಷೆ ಆಶಾ, ಘಟ ಸಮಿತಿ ಅಧ್ಯಕ್ಷರಾದ ಮೋಹನ್ ಸಾಲ್ಯಾನ್, ಪದಾಧಿಕಾರಿಗಳು ಹಾಗೂ ವಿಕಾಸವಾಹಿಸಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪಿಲಾತಬೆಟ್ಟು ಗ್ರಾಮದ ಸೇವಾದೀಕ್ಷಿತೆ ಪುಷ್ಪಾವತಿ ಕಾರ್‍ಯಕ್ರಮ ನಿರೂಪಿಸಿದರು.

