ವಿಟ್ಲ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬಂಟ್ಟಾಳ ತಾಲೂಕು ಹಾಗೂ ರೋಟರಿ ಕ್ಲಬ್ ವಿಟ್ಲ ಮತ್ತು ಎನ್.ಎಸ್.ಎಸ್ ಘಟಕ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಜಂಟಿ ಆಶ್ರಯದಲ್ಲಿ ವಿಟ್ಲ ಪೇಟೆಯ ಇಕ್ಕೆಲಗಳಲ್ಲಿರುವ ಪ್ಯಾಸ್ಟಿಕ್ ತ್ಯಾಜ್ಯ ನಿರ್ಮೂಲನ ಮಾಡುವ ಶ್ರಮದಾನ ನಡೆಯಿತು.
ವಿಟ್ಲ ರೋಟರಿ ಕ್ಲಬ್ ವಿಟ್ಲ ಇದರ ಅಧ್ಯಕ್ಷ ಜಯರಾಮ್ ರೈ ಉದ್ಘಾಟಿಸಿ ಮಾತನಾಡಿ ಸ್ವಚ್ಚತೆಯೆನ್ನುವುದು ಕೇವಲ ಸಾಂಕೇತಿಕವಾಗಿರದೇ ಪ್ರತಿಯೊಬ್ಬರು ಪ್ರತಿನಿತ್ಯವು ತಮ್ಮ ಬದುಕಿನ ಎಲ್ಲಾ ಹಂತಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ ಎಂದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ದಮಯಂತಿ ವಹಿಸಿದ್ದರು. ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಸಂಜೀವ ಪೂಜಾರಿ, ಅಣ್ಣಪ್ಪ ಸಾಸ್ತನ, ಸಂಮ್ರಿತಾ, ಕುಮಾರಿ ದಯಾ ಉಪಸ್ಥಿತರಿದ್ದರು.
ಕೈರುನೀಸಾ ಸ್ವಾಗತಿಸಿದರು. ಮಮತಾ ವಂದಿಸಿದರು. ಗ್ರಾಮ ವಿಕಾಸ ಅಧ್ಯಕ್ಷೆ ಚೈತ್ರಾ ನಿರೂಪಿಸಿದರು.
