ವಿ.ಹಿಂ.ಪ. ಬಜರಂಗದಳ ಕಲ್ಮಂಜ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಊರವರ ಸಹಕಾರದಿಂದ ಈ ವರ್ಷದ ಎರಡನೇಯ ದಿನದ ಶ್ರಮದಾನವನ್ನು ಕಲ್ಮಂಜ ಗ್ರಾಮದ ಸತ್ಯನಪಲ್ಕೆ-ಬನದಬೈಲು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಕಸಗಳನ್ನು ಮತ್ತು ಗಿಡ ಪೊದೆಗಳನ್ನು ತೆಗೆಯುವ ಮೂಲಕ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಬಿಡುವಿನ ವೇಳೆ ಈ ಯುವಕರ ತಂಡ ಮಗದೊಮ್ಮೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿತು. ಈ ಶ್ರಮದಾನದಲ್ಲಿ ಪ್ರವೀಣ್ ಗೌಡ ಕರಿಯನೆಲ ( ಗ್ರಾಮ ಪಂಚಾಯತ್ ಸದಸ್ಯರು), ಅನಿಲ್, ಮೋಹನ್ ಮೂಡಾಯಿಬೆಟ್ಟು, ಸುಂದರ ಗೌಡ ಬಂಡ್ರುಜಾಲು, ಸತ್ಯಪ್ರಸಾದ್, ನಾಗೇಶ್ ಬಂಡ್ರುಜಾಲ್ ,ಪುರುಷೋತ್ತಮ್, ಧರ್ಮಸ್ಥಳ ವಿಪತ್ತು ನಿರ್ವಹಣೆ ಘಟಕದ ಸದಸ್ಯರಾದ ಸಾಂತಪ್ಪ M, ನಾಗೇಶ್ ಗೌಡ ಮತ್ತು ಮುರಳಿ ಮೂಡಯಿಬೆಟ್ಟು ಭಾಗವಹಿಸಿದ್ದರು.
ಶ್ರಮದಾನ ಕಾರ್ಯದಲ್ಲಿ ವಿ.ಹಿಂ.ಪ ಬಜರಂಗದಳ ಕಲ್ಮಂಜ ಸದಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.
