ಬಂಟ್ವಾಳ: ತಾಲೂಕಿನ ಬಡಗಕಜೆಕಾರು ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ ( ರಿ. ) ಮಾಡ ಇದರ ವತಿಯಿಂದ 2ನೇ ಅವಧಿಯ ಸ್ವಚ್ಛ ಕಾರ್ಯಕ್ರಮ ಜರಗಿತು.

ಮಂಡಳಿಯ ಗೌರವಾಧ್ಯಕ್ಷ ಸುಧಾಕರ್ ಶೆಣೈ ಖಂಡಿಗ ಇವರ ಮುಂದಾಳತ್ವದಲ್ಲಿ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಮಾಡ, ಅಧ್ಯಕ್ಷ ಕೃಷ್ಣಪ್ಪ ಮಾಡ ಇವರ ಸಹಕಾರದೊಂದಿಗೆ ಹಾಗೂ ಊರಿನ ಸಮಾಜ ಸೇವಕರಿಂದ ಮಾಡ- ನಾಡೇಲು ಕ್ರಾಸ್ ತನಕ ಸ್ವಚ್ಚ ಭಾರತ್ ಕಾರ್ಯಕ್ರಮದ ಪ್ರೇರಣೆ ಮೂಲಕ ಮಾರ್ಗದ ಎರಡು ಬದಿ ಸ್ವಚ್ಛ ಮಾಡುವ ಮೂಲಕ ವಾಹನ ಸಂಚಾರಕ್ಕೆ ಅಡೆ ತಡೆಯಾಗುತ್ತಿದ್ದ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಈ ಶ್ರಮದಾನದಲ್ಲಿ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಿರಿಯರು, ಭಾಗವಹಿಸಿದರು.

