ಬಂಟ್ವಾಳ: ವಿದ್ಯೆ ಎನ್ನುವುದು ಒಬ್ಬ ವಕ್ಯಿಯ ವ್ಯಕ್ತಿತ್ವಕ್ಕೆ ಭೂಷಣ. ಹೆಣ್ಣೊಬ್ಬಳ ತಲೆಯಲ್ಲಿರುವ ಹೂ ಹೇಗೆ ಆಕೆಗೆ ಅಲಂಕಾರ ಪ್ರಾಯವೊ ಹಾಗೆ ವಿದ್ಯಾರ್ಥಿಯಾದವರ ಪಾಲಿಗೆ ವಿದ್ಯೆಯು ಅಲಂಕಾರವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಪ್ರೊ ಗಣಪತಿ ಭಟ್ ಕುಳಮರ್ವ ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಪೋಸ್ಟ್ ಗ್ರಾಜ್ಯುವೇಟ್ ಡೇ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿದ್ಯೆ ಎನುವುದ್ನು ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾದು ಸಂಪತ್ತು ಮತ್ತು ಅದು ಹಂಚುವ ಸಂಪತ್ತು. ಅಂತಹ ಸಂಪತ್ತನ್ನು ಗಳಿಸಲು ಸಾಧನೆ ಬೇಕು. ಆದಕಾರಣ ವಿದ್ಯಾರ್ಜನೆ ಎನ್ನುವುದು ತಪ್ಪಸ್ಸು. ವಿದ್ಯಾರ್ಥಿಯಾದವ ಓರ್ವ ಸಾಧಕ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾಂಡುರಂಗ ನಾಯಕ್ ಸ್ನಾತಕೋತ್ತರ ಪದವಿ ಎನ್ನುವುದು ಭವಿಷ್ಯದ ಪ್ರಧಾನ ಘಟ್ಟ ಅಲ್ಲದೆ ಜವಾಬ್ದಾರಿಯುತವಾಗಿ ವ್ಯವಹರಿಸಬೇಕಾದ ಹಂತ. ಇಲ್ಲಿನ ಸಾಧನೆ ಭವಿಷ್ಯ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದರು.
ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾದ ನೆಲ್ಸನ್ ಮಾರ್ವಿನ್ ಫೆರ್ನಾಂಡೀಸ್ ವಿಭಾಗದ ವರದಿ ಮಂಡಿಸಿದರು ಉಪನ್ಯಾಸಕಿ ಸ್ವಾತಿ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕಿ ಮಂಜುಳಾ ಡಿ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ವಾಣಿಜ್ಯ ಸ್ನಾತಕೋತ್ತರ ಸಂಘದ ಕಾರ್ಯದರ್ಶಿ ರಿದಿಶಾ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಅರ್ಚನಾ ವಂದಿಸಿದರು ವಿದ್ಯಾರ್ಥಿನಿ ದೀಕ್ಷಿತಾ ಎಲ್ ಕಾರ್ಯಕ್ರಮ ನಿರೂಪಿಸಿದರು.

