ವಿಟ್ಲ: ಸೂರ್ಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು. ಮೈಸೂರು ಎಸ್‌ಎಲ್‌ವಿ ಬುಕ್ಸ್ ಏಜೆನ್ಸಿಯ ಮಾಲಕರಾದ ದಿವಾಕರ ನೇರ್ಲಾಜೆಯವರು ಒದಗಿಸಿರುವ 37,850 ರೂಗಳ ಶಾಲಾ ಬರವಣಿಗೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ, ಅವರ ಸಹೋದರ ಸುರೇಶ್ ನೇರ್ಲಾಜೆ ವಿತರಿಸಿದರು. ಇದರೊಂದಿಗೆ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಆರಂಭ ಕಾರ್‍ಯಕ್ರಮ ನಡೆಯಿತು.
ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೆಸರರಾದ ಸುರೇಶ್ ಮುಕ್ಕುಡ ಎಲ್‌ಕೆಜಿ ವಿಭಾಗ ಉದ್ಘಾಟಿಸಿದರು. ಇಡ್ಕಿದು ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ರೈ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪ್ರಫುಲ್ಲಚಂದ ಕೋಲ್ಪ್ರೆ, ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ಕೆಂರ್ದೆಲ್, ಹಿಮಕರ ನೇರ್ಲಾಜೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೋನಪ್ಪ, ಉಪಾಧ್ಯಕ್ಷರಾದ ಪುಷ್ಪಾವತಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಮಂಗಲಿ ಎಸ್, ಕಂಬಳಬೆಟ್ಟು ಕ್ಲಸ್ಟರ್ ಸಿ.ಆರ್.ಪಿ ಕೆ.ಕೆ ಮಾಸ್ಟರ್ ಹಾಜರಿದ್ದರು. ವಿನುತಾ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕಿ ಡೊರೀನ ಡಿ’ಸೋಜ ವಂದಿಸಿದರು. ಶ್ರೀಪತಿ ನಾಯಕ್ ಕಾರ್‍ಯಕ್ರಮ ನಿರೂಪಿಸಿದರು.
