Monday, June 30, 2025

*ಸೂರಿಕುಮೇರು ಚರ್ಚ್ ನಲ್ಲಿ ಸಾಂತ್ ಮಾರಿ ಹಬ್ಬ ಆಚರಣೆ*

ಬಂಟ್ವಾಳ : ಕೊರೋನಾ ಸಾಂಕ್ರಾಮಿಕ ರೋಗದಿಂದ ರಕ್ಷಿಸಿದ ದೇವರಿಗೆ ಕೃತಜ್ಞತೆ ಹೇಳುವ ಮೂಲಕ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ ಎಲ್ಲಾ ಕ್ರೈಸ್ತ ಭಕ್ತಾದಿಗಳು ನವಂಬರ್ 17 ರ ಬುಧವಾರ ಸಾಂತ್ ಮಾರಿ ಹಬ್ಬವನ್ನು ಆಚರಿಸಿದರು.

ಮೊಗರ್ನಾಡ್ ವಲಯದ ವಿಕಾರ್ ವಾರ ರವರಾದ ಅತೀ ವಂದನೀಯ ಡಾ| ಮಾರ್ಕ್ ಕ್ಯಾಸ್ತೆಲಿನೊ, ಪ್ರಧಾನ ಧರ್ಮಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವದಿಸಿದರು.

ದೆಲಂತ ಬೆಟ್ಟು ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಸುನಿಲ್ ಪಿಂಟೊರವರು ಪ್ರವಚನ ನೀಡುತ್ತಾ, ಸಾಂತ್ ಮಾರಿ ಹಬ್ಬ ಚರ್ಚ್ ಕುಟುಂಬದ ಹಬ್ಬ. ಸಂತ ಜೋಸೆಫರು ಕುಟುಂಬದಲ್ಲಿ ಮಕ್ಕಳನ್ನು ಪ್ರೀತಿಸಿದ ಹಾಗೆ ನಾವೂ ಒಬ್ಬರಿಗೊಬ್ಬರು ಮಕ್ಕಳ ಹಾಗೆ ಪ್ರೀತಿಸಬೇಕು. ಕ್ರೈಸ್ತ ಕುಟುಂಬದಲ್ಲಿ ತಪ್ಪುಗಳು ನಡೆದು, ಭಿನ್ನಾಭಿಪ್ರಾಯಗಳು ಎದುರಾದಾಗ ಅದನ್ನು ಏಕತಾ ಭಾವದಿಂದ ಸರಿಪಡಿಸಬೇಕೇ ಹೊರತು ಸಾಮಾಜಿಕ‌ ಜಾಲತಾಣಗಳಲ್ಲಿ ಪ್ರಕಟಿಸಿ ಮಾನ ಹರಾಜು ಮಾಡುವುದು ಮಹಾ ಪಾಪ ಎಂದ ಅವರು, ಪರಸ್ಪರ ಕ್ಷಮಿಸಿ ಬಾಳುವುದೇ ನಿಜವಾದ ಸಾಂತ್ ಮಾರಿ ಹಬ್ಬದ ಆಶಯ ಎಂದರು.

ವಲಯದ ಇತರ ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚರ್ಚ್ ಧರ್ಮಗುರುಗಳಾದ ಫಾದರ್ ಗ್ರೆಗರಿ ಪಿರೇರಾರವರ ಜನ್ಮ ದಿನವನ್ನು ಆಚರಿಸಲಾಯಿತು.

More from the blog

Strike : ಜು. 9ರ ಕಾರ್ಮಿಕರ ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಲು ಕಾಮ್ರೇಡ್ ಪಿ.ಪಿ ಅಪ್ಪಣ್ಣ ಕರೆ

ಬಂಟ್ವಾಳ : ಜುಲೈ 9 ರಂದು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಈ...

ನಿರ್ಧಿಷ್ಟ ಗುರಿಯೊಂದಿಗೆ ಯುವವಾಹಿನಿಯ ಸಂಘಟಿತ ಪಯಣ : ಭುವನೇಶ್ ಪಚ್ಚಿನಡ್ಕ..

ಬಂಟ್ವಾಳ : ನಿರ್ದಿಷ್ಟ ಗುರಿಯೊಂದಿಗೆ ಸಾಧನಾ ಪಥದಲ್ಲಿ ಯುವವಾಹಿನಿ ಸಂಘಟಿತವಾಗಿ ಪಯಣಿಸುತ್ತಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ರಜತವರ್ಷದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು. ಅವರು ರವಿವಾರ ಬಿ ಸಿ ರೋಡ್ ಯುವವಾಹಿನಿ ಭವನದಲ್ಲಿ...

ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್‌ ಬಳಕೆ ಕಾರಣ – ಆಘಾತಕಾರಿ ವರದಿ ಬೆಳಕಿಗೆ..

ಇತ್ತೀಚೆಗೆ ವಯಸ್ಕರು ಮಾತ್ರವಲ್ಲದೆ ಯುವ ಜನತೆ, ಮಕ್ಕಳಲ್ಲಿ ಕೂಡಾ ಹೃದಯಾಘಾತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಆನೇಕರು ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದೀಗ...

ತುಂಬೆ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ..

ಬಂಟ್ವಾಳ : ಡಾ.ಬಿ.ಅಹಮದ್ ಹಾಜಿ ಅವರ ಸಾಧನಾ ಗಾಥೆಯನ್ನು ಹಾಗೂ ಅವರ ಜೀವನದ ಬಗ್ಗೆ ಕೇಳಿದಾಗ ಅವರು ಎಷ್ಟೊಂದು ಉದಾತ್ತ ವ್ಯಕ್ತಿತ್ವದವರು ಮತ್ತು ಶಿಸ್ತು ಮತ್ತು ಬದ್ಧತೆಯಲ್ಲಿ ಬಾಳಿದವರು ಎನ್ನುವುದು ಅರ್ಥವಾಗುತ್ತದೆ. ಅಂಥವರನ್ನು...