Tuesday, January 27, 2026

ಸೂರಿಕುಮೇರು: ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಆತ್ಮಹತ್ಯಾ ತಡೆ ದಿನಾಚರಣೆ

ಬಂಟ್ವಾಳ: ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚಿನಲ್ಲಿ ಆತ್ಮಹತ್ಯಾ ತಡೆ ಅಭಿಯಾನ ದಿನವನ್ನು ಆಚರಿಸಲಾಯಿತು. ಸೂರಿಕುಮೇರು ಬೊರಿಮಾರ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ಬಲಿ ಪೂಜೆಯನ್ನು ನಡೆಸಿ, ಆತ್ಮಹತ್ಯೆ ಮಾಡುವುದನ್ನು ವಿರೋಧಿಸೋಣ, ಜೀವನವೆಂಬುದು ದೇವರು ನಮಗೆ ಕೊಟ್ಟ ಸುಂದರ ವರವಾಗಿದ್ದು, ಎಲ್ಲರೂ ದೇವರ ಮೇಲೆಈ ವಿಶ್ವಾಸವನ್ನಿಟ್ಟು ಕೊನೆ ಉಸಿರು ದೇವರು ಕೊಂಡು ಹೋಗುವ ತನಕ ಒಳ್ಳೆಯ ಜೀವನ ನಡೆಸುವಂತೆ ಕರೆ ನೀಡಿದರು.

           

ಬಲಿಪೂಜೆಯ ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರ ನಿರ್ದೇಶನದಂತೆ ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರು ನೆರೆದ ಎಲ್ಲಾ ಜನರಿಗೆ ನಾನು ಆತ್ಮಹತ್ಯೆ ಮಾಡುವುದಿಲ್ಲ ಎಂಬ ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ ರವರು ಮಾತನಾಡಿ, ಆತ್ಮಹತ್ಯೆ ಮಾಡುವುದರಿಂದ ಇಡೀ ಕುಟುಂಬಕ್ಕೆ ಅವಮಾನ ಮಾತ್ರವಲ್ಲದೇ ಉಳಿದವರೆಲ್ಲರೂ ಜೀವಮಾನವಿಡೀ ಕೊರಗುವುದರಿಂದಲೇ ದಿನವನ್ನು ಕಳೆಯಬೇಕು. ಇದರಿಂದ ನಾವು ದೂರ ಇರುವಂತೆ ಕರೆನೀಡಿದರು. ಜೀವನ್ ನಿಲಯ ಕಾನ್ವೆಂಟಿನ ಶ್ರೇಷ್ಠ ಧರ್ಮ ಭಗಿನಿ ಸಹೋದರಿ ನ್ಯಾನ್ಸಿ ಮಾತನಾಡಿ, ಯುವ ಜನರಿಗೆ ಆತ್ಮಹತ್ಯೆ ಮಾಡದಂತೆ ಕರೆನೀಡಿದರು. ನೆರೆದ ಎಲ್ಲರೂ ಆತ್ಮಹತ್ಯೆ ವಿರುದ್ಧವಾಗಿ ಹಳದಿ ಬಣ್ಣದ ರಿಬ್ಬನ್ನನ್ನು ಬಟ್ಟೆಗೆ ಹಚ್ಚುವ ಮುಖಾಂತರ ಆತ್ಮಹತ್ಯಾ ತಡೆ ಅಭಿಯಾನ ದಿನಾಚರಣೆಯಲ್ಲಿ ಪಾಲ್ಗೊಂಡರು. ಪಾಲನಾ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜರವರು ವಂದಿಸಿದರು. ಕುಮಾರಿ ಆಲಿಫಿಯಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.

More from the blog

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...