ಸುಳ್ಯ : ಶಾಮಿಯಾನ ಕಟ್ಟುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯದ ಎಲಿಮಲೆಯಲ್ಲಿ ನಡೆದಿದೆ. ಮೃತ ಯುವಕನನ್ನು ಎಲಿಮಲೆ ಸಮೀಪದ ಉಳಿಯ ನಿವಾಸಿ ಪ್ರೀತೇಶ್ (19) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಗುರುವಾರ ಮದುವೆ ಮನೆಯಲ್ಲಿ ಶಾಮಿಯಾನ ಹಾಕುತ್ತಿದ್ದ ಸಂದರ್ಭದಲ್ಲಿ ಶಾಮಿಯಾನ ಹಾಕುತ್ತಿದ್ದ ಯುವಕನಿಗೆ ವಿದ್ಯುತ್ ತಂತಿ ಸ್ಪರ್ಶವಾಗಿದೆ. ವಿದ್ಯುತ್ ಆಘಾತಕ್ಕೆ ಒಳಗಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ . ಎಲಿಮಲೆ ಸಮೀಪದ ದಿ| ಸತ್ಯನಾರಾಯಣ ಗೌಡ ಮತ್ತು ಲೀಲಾವತಿ ಎಂಬವರ ಏಕೈಕ ಪುತ್ರನಾಗಿದ್ದು, ತಂದೆಯ ಮರಣದ ನಂತರ ಪ್ರೀತೇಶನೇ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಆದರೆ ಇದೀಗ ಈತನ ತಾಯಿಗೆ ಬರಸಿಡಿಲು ಬಡಿದಂತಾಗಿದೆ.
ಇದೀಗ ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಶವಪರೀಕ್ಷೆ ನಡೆಸಿದ ಬಳಿಕವಷ್ಟೇ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.

