ಉಡುಪಿ: ಪರೀಕ್ಷೆ ಯಲ್ಲಿ ಫೇಲಾದ ಯುವತಿ ಜೀವನ ಎಂಬ ಪರೀಕ್ಷೆಯಲ್ಲೂ ಪೇಲಾಗಿದ್ದಾಳೆ. ಕೇವಲ ಒಂದು ವಿಷಯದಲ್ಲಿ ಅನುತ್ತೀರ್ಣ ಗೊಂಡಿರುವ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಶರಣಾಗಿರುವುದು ಇಡೀ ಕಾಲೇಜನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಬೇಸರದಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ.

ಹೆಬ್ರಿಯ ನಡುಮನೆ ಗ್ರಾಮ ನಿವಾಸಿ ಪ್ರಜ್ಞಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದ್ವಿತೀಯ ಪಿಯು ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಪ್ರಜ್ಞಾ ಕನ್ನಡ ವಿಷಯದಲ್ಲಿ ಅನುತ್ತೀರ್ಣಳಾಗಿದ್ದರು. ಉಳಿದಂತೆ ಐದು ವಿಷಯಗಳಲ್ಲೂ ಶೇ.60ಕ್ಕಿಂತಲೂ ಅಧಿಕ ಅಂಕಗಳನ್ನು ಗಳಿಸಿದ್ದರು. ಕನ್ನಡ ವಿಷಯದಲ್ಲಿ ಒಂದಂಕಿ ಅಂಕವನ್ನಷ್ಟೇ ಪಡೆದಿದ್ದರು. ಈ ಫಲಿತಾಂಶದಿಂದ ಮನನೊಂದ ಪ್ರಜ್ಞಾ ಮನೆಯ ಕೋಣೆಯೊಂದರಲ್ಲಿ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.