ಬಂಟ್ವಾಳ: ಚಲಿಸುವ ರೈಲಿನಡಿಗೆ ತಲೆ ಇಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕ ಸಮೀಪದ ಗೋಳ್ತಮಜಲು ಮದಕ್ಕ ಎಂಬಲ್ಲಿ ನಡೆದಿದೆ.
ಗೋಳ್ತಮಜಲು ಗ್ರಾಮದ ಮೈರ ದಿ| ವೆಂಕಪ್ಪ ಗೌಡ ಅವರ ಮಗ ಪುರಂದರ (28) ಆತ್ಮಹತ್ಯೆ ಮಾಡಿಕೊಂಡ ಯುವಕ.
ವೀರಕಂಬದಲ್ಲಿ ಗಿಳ್ಕಿಂಜತ್ತಾಯ ಜಾತ್ರೆ ನಡೆಯುತ್ತಿದ್ದು ನಿನ್ನೆ ರಾತ್ರಿ ಸುಮಾರು 10.30 ಗಂಟೆವರೆಗೂ ಈತ ಜಾತ್ರೆಯಲ್ಲಿ ಪಾಲ್ಗೊಂಡಿದ್ದ. ಅಲ್ಲದೆ ಕಾರ್ಯಕ್ರಮ ನಿರೂಪಣೆ ಮಾಡಿದ್ದ. ಜಾತ್ರೆಯ ಬಳಿಕ ಮನೆಗೆ ಹೋಗದೆ ಮುಂಜಾನೆ ವೇಳೆ ತಲೆ ಕೊಟ್ಟಿರಬೇಕೆಂದು ಹೇಳಲಾಗುತ್ತಿದೆ.


ಈತ ಸರ್ವೀಸ್ ಸ್ಟೇಷನ್ ಹಾಗೂ ಮಾರುತಿ ಶೋರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ಅವಿವಾಹಿತನಾಗಿದ್ದ ಈತ ಕುಡಿತದ ಚಟ ಹೊಂದಿದ್ದ , ಕೆಲ ಸಮಯದ ಹಿಂದೆ ಕುಡಿತದ ಚಟ ಬಿಡಿಸಲು ಈತನನ್ನು ಮಂಗಳೂರು ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು.
ಆದರೆ ಯಾವ ಕಾರಣಕ್ಕೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದಿಲ್ಲ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್ಐ. ಚಂದ್ರಶೇಖರ್ ಭೇಟಿ ನೀಡಿದ್ದಾರೆ.