ದ.ಕ.ಜಿಲ್ಲಾ ಕಾಂಗ್ರೇಸ್ ಸಹಕಾರಿ ಘಟಕದ ಸಂಚಾಲಕರಾಗಿ ಸುದರ್ಶನ್ ಜೈನ್ ನೇಮಕ

ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯಲ್ಲಿ ಸಹಕಾರಿ ಘಟಕ ನೂತನವಾಗಿ ಕಾರ್ಯರಂಭ ಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್‌ನ ಸಹಕಾರಿ ಘಟಕಕ್ಕೆ ಸುದರ್ಶನ್ ಜೈನ್ ಬಂಟ್ವಾಳಇವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಶಿಫಾರಸಿನಂತೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ ಆದೇಶದ ಮೇರೆಗೆ ದ.ಕ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್ ರವರರು ನೇಮಕ ಮಾಡಿರುತ್ತಾರೆ. ಹಾಗೂ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಕೌಶಲ್ ಪ್ರಸಾದ್ ಶೆಟ್ಟಿ ಇವರನ್ನು ಸಹ ಸಂಚಾಲಕರಾಗಿ ನೇಮಮಿಸಲಾಗಿದೆ.
ಮುಂದಿನ ದಿನಗಳಲ್ಲಿ ಸಹಕಾರಿ ಘಟಕ, ಜಿಲ್ಲಾ ಸಮಿತಿ, ಹಾಗೂ ಪ್ರತೀ ಬ್ಲಾಕ್ ಕಾಂಗ್ರೇಸ್ ಮಟ್ಟದಲ್ಲಿ ಸಹಕಾರಿ ಘಟಕ ಸಂಚಾಲಕರುಗಳನ್ನು ನೇಮಿಸಿ, ಬ್ಲಾಕ್ ಸಮಿತಿಗಳನ್ನು ರಚಿಸಲಾಗುವುದು ರಾಷ್ಟ್ರದಲ್ಲಿ ಸಹಕಾರಿ ಕ್ಷೇತ್ರಗಳ ಬೆಳವಣಿಗೆಗೆ ಕಾಂಗ್ರೇಸ್ ಸರಕಾರಗಳು ಮಹತ್ತರ ಪಾತ್ರ ವಹಿಸಿವೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರ ಹಾಗೂ ಕಾಂಗ್ರೇಸ್ ಪಕ್ಷದ ಬೆಳವಣಿಗೆಗಳ ಮೂಲಕ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಸುದರ್ಶನ್ ಜೈನ್ ತಿಳಿಸಿರುತ್ತಾರೆ.

