ಬಂಟ್ವಾಳ: ಎಳೆಯ ಮಗಳಿಗೆ ವಿಷ ನೀಡಿ ತಂದೆಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹ್ರದಯ ವಿದ್ರಾವಕ ಘಟನೆ ಬಿಸಿರೋಡಿನ ಹ್ರದಯಭಾಗದಲ್ಲಿ ನಡೆದಿದೆ.
ಬಿಸಿರೋಡಿನ ವಿವೇಕ ನಗರದ ಕ್ರಷ್ಣಾನಂದಾ ರೆಸಿಡೆನ್ಸಿ ಯಲ್ಲಿ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ.
ಪ್ರಭಾಕರ (45) ಹಾಗೂ ಮಗು ಪ್ರಣಮ್ಯ (12) ಆತ್ಮಹತ್ಯೆ ಗೆ ಶರಣಾದವರು.
ಪ್ರಭಾಕರ ಅವರ ಪತ್ನಿ ಹೇಮಾ ಅವರು ಕೂಡಾ ವಿಷ ಸೇವಿಸಿರಬೇಕು ಎಂದು ಶಂಕಿಸಲಾಗಿದೆ.
ಅವರನ್ನು ಖಾಸಗಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಲಾಗಿದೆ ಎಂಬುದಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ನಗರ ಠಾಣಾ ಎಸ್. ಐ. ಚಂದ್ರಶೇಖರ್ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
