ವಿಟ್ಲ : ವಿಟ್ಲ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇರಾಜೆ ಸುಬ್ರಹ್ಮಣ್ಯ ಭಟ್ಟ ಅವಿರೋಧ ಆಯ್ಕೆಯಾಗಿದ್ದಾರೆ. ಡಿ.25ರಂದು ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ 12 ಮಂದಿ ನಿರ್ದೇಶಕರ ಚುನಾಯಿತರಾಗಿದ್ದು ಅಧ್ಯಕ್ಷರಾಗಿ ಸೇರಾಜೆ ಸುಬ್ರಹ್ಮಣ್ಯ ಭಟ್ಟ ಮತ್ತು ಉಪಾಧ್ಯಕ್ಷರಾಗಿ ಗೋಪಾಲ ಯಂ. ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ವಿಲಾಸ ಪ್ರಭು ಅವರು ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಸೇರಾಜೆ ಸುಬ್ರಹ್ಮಣ್ಯ ಭಟ್ಟ ಅವರು ಕಳೆದ 25 ವರ್ಷಗಳಿಂದ ಸಂಘದ ನಿರ್ದೇಶಕರಾಗಿದ್ದು ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷರಾಗಿರುವ ಅವರು ವಿಟ್ಲ ವಲಯದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಟ್ಲ ಗ್ರಾ.ಪಂ.ನ ಮಾಜಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದು, ನೀರು ಸರಬರಾಜು ವ್ಯವಸ್ಥೆಯನ್ನು ಅತ್ಯಂತ ಸೂಕ್ತವಾಗಿ ನಿರ್ವಹಿಸಿ, ಜನಮೆಚ್ಚುಗೆ ಗಳಿಸಿದ್ದರು.
ನಿರ್ದೇಶಕರಾಗಿ ಮೋಹನ ಗೌಡ ಕೆ., ಲಿಂಗಪ್ಪ ನಾಯ್ಕ, ಜಯರಾಮ ಬಲ್ಲಾಳ್, ಬಾಲಚಂದ್ರ ನಾಯಕ್, ಲೋಕನಾಥ ಶೆಟ್ಟಿ, ಗಿರಿಜ, ರೇವತಿ, ಆನಂದ ಶೆಟ್ಟಿ, ಪುಷ್ಪರಾಜ, ಗಣೇಶ ರೈ ಅವಿರೋಧವಾಗಿ ಚುನಾಯಿತರಾದರು.
