ಸುಬ್ರಹ್ಮಣ್ಯ : ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಕೆಳದಿ ರಾಣಿಚೆನ್ನಮ್ಮಾಜಿ ಅಧ್ಯಯನ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.

25/02/2024 ರಂದು ಅಭಯ ಗಣಪತಿ ದೇವಾಲಯ ಆವರಣದಲ್ಲಿ ಬೆಳಿಗ್ಗೆ 10:30 ಕ್ಕೆ ಉದ್ಘಾಟನೆಗೊಳ್ಳಲಿದೆ
ಶ್ರೀ ಸುಬ್ರಹ್ಮಣ್ಯ ಮಠ ಹಾಗೂ ಶ್ರೀನಿಕೇತನ ಟ್ರಸ್ಟ್ (ರಿ.) ಸುಬ್ರಹ್ಮಣ್ಯ ವತಿಯಿಂದ ಪ್ರಾರಂಭಗೊಳ್ಳಲಿದೆ.
ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಕೆಳದಿ ರಾಣಿಚೆನ್ನಮ್ಮಾಜಿ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಡಾ.ಜಿ.ವಿ.ಕಲ್ಲಾಪುರ
ಪತ್ರಿಕಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕುಕ್ಕೆ ಸುಬ್ರಹ್ಮಣ್ಯ ಪೌರಾಣಿಕ ಹಿನ್ನೆಲೆಯಿರುವ ಐತಿಹಾಸಿಕ ಕ್ಷೇತ್ರ . ದೇಶದ ಮೂಲೆ ಮೂಲೆ ಗಳಿಂದ ಸಾವಿರಾರು ಭಕ್ತರು ಬಂದು ಹೋಗುತ್ತಾರೆ . ಅಂತಹ ಭಕ್ತರಲ್ಲಿ ಸುಬ್ರಹ್ಮಣ್ಯದ ಇತಿಹಾಸವನ್ನು ಮಹತ್ವವನ್ನು ತಿಳಿಯಬೇಕೆಂಬ ಹಂಬಲವುಳ್ಳವರಾಗಿರುತ್ತಾರೆ . ಇಲ್ಲಿನ ಇತಿಹಾಸವನ್ನು ತಿಳಿಸಲು ಹಾಗೂ ಈ ಕ್ಷೇತ್ರದ ಮಹತ್ವದ ಬಗ್ಗೆ ಶಿಕ್ಷಣ ಹಾಗೂ ಮಾಹಿತಿ ನೀಡುವ ಸಲುವಾಗಿ ಮೇಲ್ಕಾಣಿಸಿದ ಸಂಸ್ಥೆಯನ್ನು ಪ್ರಾರಂಭಿಸಲಾಗುತ್ತಿದೆ . ವಸ್ತುಸಂಗ್ರಹಾಲಯವೆಂದರೆ ನಾಲ್ಕಾರು ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸುವ ಸ್ಥಳ ಎಂಬ ಮಾತಿದೆ . ಆದರೆ ವಸ್ತು ಸಂಗ್ರಹಾಲಯ ಒಂದು ಶಿಕ್ಷಣ ಸಂಸ್ಥೆ . ಇಲ್ಲಿ ಪ್ರದರ್ಶನಕ್ಕಿಡಲಾಗುವ ಪ್ರತಿಯೊಂದು ಪ್ರಾಚೀನ ವಸ್ತುಗಳಿಗೂ ತನ್ನದೇ ಆದ ಇತಿಹಾಸ ಇರುತ್ತದೆ . ನಮ್ಮೆಲ್ಲರ ಬದುಕಿಗೆ ಇತಿಹಾಸವೆ ಬುನಾದಿ , ನಮ್ಮ ಪೂರ್ವಜರ ಇತಿಹಾಸವನ್ನು ಅಂತಹ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯವಸ್ತುಗಳಾದ , ಪ್ರಾಚೀನರು ಬಳಸುತ್ತಿದ್ದ ಗೃಹೋಪಯೋಗಿ ವಸ್ತುಗಳು , ವ್ಯಾಪಾರಕ್ಕಾಗಿ ಬಳಸುತಿದ್ದ ವಸ್ತುಗಳು , ಕೃಷಿ ಸಲಕರಣೆಗಳು ಜೊತೆಗೆ ಐತಿಹಾಸಿಕ ದಾಖಲೆಗಳಾದ ಶಾಸನಗಳು , ನಾಣ್ಯಗಳು , ಕಾಗದ ಪತ್ರಗಳು ಇತ್ಯಾದಿಗಳ ಅಧ್ಯಯನ , ಅಧ್ಯಾಪನ , ಸಂಶೋಧನೆ ಪ್ರಕಟಣೆಗಳ ಮೂಲಕ ಮಾಹಿತಿ ನೀಡುವ ಸಂಸ್ಥೆಯಾಗಿದೆ . ಶ್ರೀನಿಕೇತನ ವಸ್ತುಸಂಗ್ರಹಾಲಯದಲ್ಲಿ ಪ್ರಾರಂಭಿಕ ಹಂತದಲ್ಲಿ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರ ಸಂಗ್ರಹಗಳಾದ ಮೈಸೂರು , ತಂಜಾವೂರು , ಗಂಜೀಫಾ ಇತ್ಯಾದಿ ಪ್ರಕಾರಗಳ ವರ್ಣಚಿತ್ರಗಳು , ಪ್ರಾಚೀನ ನಾಣ್ಯಗಳು , ವಿಶೇಷವಾಗಿ ರಾಮಟಂಕಿ ನಾಣ್ಯಗಳು , ವಿದೇಶಿ ನಾಣ್ಯಗಳು ನೋಟುಗಳು , ಕೃಷಿ ಉಪಕರಣಗಳು , ಮರದ ಕೆತ್ತನೆಗಳು , ಪೂಜಾ ಸಾಮಗ್ರಿಗಳು , ಗೃಹೋಪಯೋಗಿ ವಸ್ತುಗಳು , ಆಲಂಕಾರಿಕ ವಸ್ತುಗಳು , ತಾಳೆಯೋಲೆ ಹಾಗೂ ಕಾಗದ ಹಸ್ತಪ್ರತಿಗಳು ಇತ್ಯಾದಿ ಅನೇಕ ವಸ್ತುಗಳನ್ನು ಕನ್ನಡ – ಹಿಂದಿ – ಆಂಗ್ಲಭಾಷೆಯ ಲೇಬಲ್ ಸಹಿತ ಪ್ರದರ್ಶನಕ್ಕಿಡಲಾಗುವುದು.
ಶಿಕ್ಷಣಕ್ಕೆ ಸಂಬಂದಿಸಿದಂತೆ ಪ್ರಾಚೀನ ಲಿಪಿಗಳ ತರಬೇತಿ , ಮೋಡಿ ಲಿಪಿಗಳ ತರಬೇತಿ , ಶಾಸನಗಳ ಅಧ್ಯಯನ ಹಾಗೂ ಅವುಗಳಿಗೆ ಸಂಬದಿಸಿದಂತೆ ಶಾರ್ಟ್ ಟರ್ಮ್ ಆಸ್ಟೈನ್ ಡಿಪ್ಲಮೋ ತರಗತಿಗಳನ್ನು ತರಬೇತಿ ಪ್ರಾರಂಬಿಸಲಾಗುವುದು . ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ – ಇದರ ಮೂಲ ಉದ್ದೇಶ ಕೆಳದಿ ಅರಸರು ದಕ್ಷಿಣ ಕನ್ನಡ ಜಿಲ್ಲೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ , ಅದರ ಕುರಿತು ಸಮಗ್ರವಾದ ಅಧ್ಯಯನಗಳು ಆಗಬೇಕಾಗಿದೆ . ಕೊಡುಗೆಯ ಬಗ್ಗೆ ಕೆಲವೊಂದು ಉದಾಹರಣೆಯನ್ನು ಹೇಳುವುದಾದರೆ ಸುಬ್ರಹ್ಮಣ್ಯ ದೇವರ ಪೂಜೆಗೆ ಬಲ್ವಗ್ರಾಮದಲ್ಲಿ ಭೂದಾನ ಕೊಟ್ಟ , ಶಾಸನ , ಕೆಳದಿ ಅರಸ ವೆಂಕಟಪ್ಪನಾಯಕ ಚಂಪಾ ಷಷ್ಟಿಉತ್ಸವ ನಿರಂತರವಾಗಿ ನಡೆಯ ಬೇಕೆಂದು ನೀಡಿರುವ ಬ್ರಹ್ಮರಥ ( ಇಂದಿಗೂ ನೋಡಬಹುದಾಗಿದೆ ) , ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ನೀಡಿರುವ ಪಂಚಲೋಹದ ವಿಗ್ರಹಗಳ , ಶಂಕರನಾರಾಯಣ ದೇವಾಲಯಕ್ಕೆ ನೀಡಿರುವ ವಸ್ತುಗಳು , ಉಡುಪಿಯ ಕೃಷ್ಣ ಮಠವನ್ನು ಜೀರ್ಣೋದ್ದಾರ ಮಾಡಿಸಿರುವುದು , ಮಂಗಳೂರಿನ ಚರ್ಚ್‌ಗೆ ಭೂದಾನ , ಮೂಡಬಿದಿರೆ ಜೈನ ಬಸದಿಗೆ ದಾನ ಇತ್ಯಾದಿ ಅನೇಕವುಗಳನ್ನು ಉದಾಹರಣೆ ನೀಡಬಹುದು . ಈ ಎಲ್ಲಾ ವಿಚಾರಗಳ ಕುರಿತು ಸಂಶೋಧನೆಗಳು ಶ್ರೀ ಸುಬ್ರಹ್ಮಣ್ಯ ಮಠದ ಒತ್ತಾಸೆಯಿಂದ ಪೀಠಾದಿಪತಿಗಳಾಗಿರುವ ಶ್ರೀ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಈ ಸಂಸ್ಥೆಯನ್ನು ಸ್ಥಾಪಿಸುತ್ತಿದ್ದಾರೆ . ಈ ವಸ್ತುಸಂಗ್ರಹಾಲಯದ ಮೂಲಕ ಪ್ರತಿವರ್ಷವೂ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಬೇಕೆಂದು ನಿರ್ಧರಿಸಿದ್ದು , ಪ್ರಸ್ತುತ ಸಾಲಿನಲ್ಲಿ ವರ್ಣಚಿತ್ರಕಾರರಿಗೆ ಪ್ರೋತ್ಸಾಹಿಸುವ ಸಲುವಾಗಿ ಪೋಸ್ಟ್ ಕಾರ್ಡಿನಲ್ಲಿ ರಾಮಾಯಣದ ಚಿತ್ರಗಳನ್ನು ಬರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಇದರಲ್ಲಿ 8 ರಿಂದ 80 ವರ್ಷದ ಯಾರು ಬೇಕಾದರೂ ಭಾರತದಾದ್ಯಂತದಿಂದ ಭಾಗವಹಿಸ ಬಹುದು . ಭಾಗವಹಿಸುವವರು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿ ಕೊಳ್ಳಬೇಕು , ನೋಂದಣೆ ಸಂಖ್ಯೆಯೊಂದಿಗೆ ತಮ್ಮ ಚಿತ್ರಗಳನ್ನು ಕಳಿಸಬೇಕು . ಹಾಗೆ ಬರುವ ಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ . ಭಾಗವಹಿಸುವವರು ಭಾರತದ ಯಾವ ಶೈಲಿಯಲ್ಲಿ ಬೇಕಾದರೂ ಚಿತ್ರಗಳನ್ನು ಬರೆಯಬಹುದಾಗಿದೆ. ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು,
ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ್ ಜೋಯಿಸ್
ನಿವೃತ್ತ ಉಪನ್ಯಾಸಕರು ಇತಿಹಾಸ ಸಂಶೋಧಕರು ಡಾ.ಎಸ್. ಎನ್ ಉಡುಪ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.