ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಕಾಲಾವಧಿ ಜಾತ್ರೆಯ ಸಂದರ್ಭದಲ್ಲಿ ಪಂಚಶ್ರೀ ಗ್ರೂಪ್ ವಿಟ್ಲ ಇದರ ವತಿಯಿಂದ ನಡೆದ 9ನೇ ವರ್ಷದ ಸ್ಟಾರ್‌ನೈಟ್ ಕಾರ್‍ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಉದ್ಘಾಟಿಸಿದರು.
ವಿಟ್ಲ ಸುರಕ್ಷಾ ಹಲ್ತ್ ಸೆಂಟರಿನ ಡಾ| ಗೀತಪ್ರಕಾಶ್, ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ, ಉದ್ಯಮಿಗಳಾದ ಶೆಣೈ ಕೋಲ್ಡ್‌ಹೌಸ್‌ನ ಗೋಕುಲ್‌ದಾಸ್ ಶೆಣೈ, ಮಂಜುನಾಥ ಎಲೆಕ್ಟ್ರಾನಿಕ್ಸ್‌ನ ಮಂಜುನಾಥ್ ಮತ್ತು ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಹರೀಶ್ ಕೆ., ಕಾರ್‍ಯಕ್ರಮ ಸಂಯೋಜಿಸಿದರು.
