ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘದ ವತಿಯಿಂದ ಒಂದು ದಿನದ ಶ್ರಮದಾನವು ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನ ಇಲ್ಲಿ ನಡೆಯಿತು.

ನೇತ್ರಾವತಿ-ಕುಮಾರಧಾರ ನದಿಗಳ ಸಂಗಮದ ನಂತರ ದೇವಸ್ಥಾನದ ಸ್ವಚ್ಛತೆಯ ಕಾರ್ಯಕ್ರಮದಲ್ಲಿ 52 ಮಂದಿ ವಿದ್ಯಾರ್ಥಿಗಳು ಮತ್ತು ೪ ಜನ ಉಪನ್ಯಾಸಕರು ಭಾಗವಹಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗಮಿಸಿ, ಮಾರ್ಗದರ್ಶನ ನೀಡಿದರು. ಶ್ರೀರಾಮ ಶಾಲೆ ಉಪ್ಪಿನಂಗಡಿ ಇದರ ಸಂಚಾಲಕರಾದ ಯು.ಜಿ. ರಾಧಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
.