Tuesday, July 15, 2025

ಕೋರೆಯಲ್ಲಿ ಸ್ಪೋಟಕ ಬಳಕೆ , ಮನೆಗೆ ಹಾನಿ: ತಹಶೀಲ್ದಾರ್ ಅವರಿಗೆ ದೂರು

ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ನಾಯಿಲ, ಕೋಮೆ ಹಾಗೂ ನರಿಕೊಂಬು ಗ್ರಾಮದ ಏಲಬೆ ಪ್ರದೇಶದಲ್ಲಿ ನಡೆಸುತ್ತಿರುವ ಕಲ್ಲಿನ ಕೋರೆಯಿಂದ ತೊಂದರೆಯಾಗುತ್ತಿದ್ದು, ಇಂದು ಬೆಳಗ್ಗೆ ಕೋರೆಯಲ್ಲಿ ಸ್ಟೋಟಕ ಬಳಸಿದ ಪರಿಣಾಮ ಸ್ಥಳೀಯ ಮನೆಯೊಂದಕ್ಕೆ ಕಲ್ಲು ಬಿದ್ದು ಹಾನಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರಿಗೆ ದೂರು ನೀಡಿದ್ದಾರೆ.

ಬೆಳಗ್ಗೆ 10.15ರ ಸುಮಾರಿಗೆ ಗೀತಾ ಅವರ ಮನೆಯ ಮೇಲೆ ಕಲ್ಲು ಬಿದ್ದು ಶೀಟ್‌ಗೆ ಹಾನಿಯಾಗಿದೆ. ಗಣಿಗಾರಿಕೆಯ ಸಂದರ್ಭ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ಅನೇಕ ಮನೆಗಳಲ್ಲಿ ಬಿರುಕು ಬಿಟ್ಟಿದೆ. ಜತೆಗೆ ಕಲ್ಲಿನ ತುಂಡುಗಳು ಸುಮಾರು 500 ಮೀ.ದೂರದವರೆಗೂ ಬೀಳುತ್ತಿದೆ.

ಕಲ್ಲಿನ ಚೂರು-ಧೂಳು ಮನೆಗಳು, ಕೃಷಿ ಜಮೀನಿನ ಮೇಲೆ ಬಿದ್ದು ಹಾನಿಯಾಗುತ್ತಿದೆ. ಇದರಿಂದ ಕೃಷಿ ಹಾನಿಯ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋರೆಯಿಂದ ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಅದರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ಬಂಟ್ವಾಳ ಪೊಲೀಸರಿಗೂ ಈ ಕುರಿತು ದೂರು ನೀಡಿದ್ದಾರೆ.

More from the blog

ಗೋಳ್ತಮಜಲು : ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅವಿರೋಧ ಆಯ್ಕೆ..

ಬಂಟ್ವಾಳ : ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2025-26 ರ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಗೋಳ್ತಮಜಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಾ ಮ್ಯಾನೇಜಿಂಗ್...

ನೇರಳಕಟ್ಟೆ : ಸರಕಾರಿ ಶಾಲಾ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನೆ..

ಬಂಟ್ವಾಳ : ನೇರಳಕಟ್ಟೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ಅನುದಾನ ಹಾಗೂ ಎನ್.ಎಮ್.ಪಿ.ಎ. ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನಾ...

ಬಿ. ಸಿ. ರೋಡ್ ನಲ್ಲಿ ತೆಂಗು ಬೆಳೆ ಮಾಹಿತಿ ಸಂವಾದ

ಬಂಟ್ವಾಳ: ತೆಂಗು ಬೆಳೆಯ ಸೂಕ್ಷ್ಮತೆಯನ್ನು ತಿಳಿದುಕೊಳ್ಳಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತೆಂಗು ಬೆಳೆಗಾರ ಕೊಂಡಾಣ ಚಂದ್ರಶೇಖರ ಗಟ್ಟಿ ಹೇಳಿದರು. ಅವರು ಜು. 15ರಂದು ಬಿ ಸಿ ರೋಡ್ ರಂಗೋಲಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ...

ಅರಣ್ಯ ಗಸ್ತುಪಾಲಕ ಜಿತೇಶ್.ಪಿ.ಗೆ ಮುಖ್ಯಮಂತ್ರಿ ಪದಕ

ಮಂಗಳೂರು:  ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಇವರು ಸುಮಾರು 20 ವರ್ಷಗಳಿಂದ ಪಂಜ, ಮಂಗಳೂರು, ಬಂಟ್ವಾಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಂಟ್ವಾಳ...