ವಿಟ್ಲ: ಹರಿದ್ವಾರದ ರಾಣಿಪುರ್ ಮಾಡ ಬಳಿಯ ಶ್ರೀ ಪ್ರೇಮ್ ನಗರ್ ಆಶ್ರಯದಲ್ಲಿ ಜೂನ್ 28ರಿಂದ ಜುಲೈ 1ರವರೆಗೆ ನಡೆಯಲಿರುವ 18 ರ ವಯೋಮಿತಿಯ ಬಾಲಕರ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ವಿಟ್ಲದ ಕಬಡ್ಡಿ ಯುವ ಪ್ರತಿಭೆ ಮಹಮ್ಮದ್ ಶಾಹಿಲ್ ವಿಟ್ಲ ಅವರು ಆಯ್ಕೆಯಾಗಿದ್ದಾರೆ.

ಇವರು ವಿಠಲ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿಠಲ ಎಜುಕೇಶನ್ ಸೊಸೈಟಿ ಹಾಗೂ ಪ್ರಾಂಶುಪಾಲರು, ಶಿಕ್ಷಕ – ಶಿಕ್ಷಕೇತರ ವರ್ಗ ತರಬೇತಿ ನೀಡಿರುವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಶ್ರೀನಿವಾಸ್ ಗೌಡ ನೆಕ್ಕಿಲಾರ್ ಅವರು
ಇವರ ಕ್ರೀಡಾ ಭವಿಷ್ಯವು ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

