Friday, June 27, 2025

ವಿಫಾ ಕಪ್ ಟ್ವೆಕಾಂಡೋ ಚಾಂಪಿಯನ್ ಶಿಪ್ : ಬಂಟ್ವಾಳ ವಿದ್ಯಾರ್ಥಿಗಳಿಗೆ 20 ಚಿನ್ನ, 6 ಬೆಳ್ಳಿ ಪದಕ

ಬಂಟ್ವಾಳ: ಬೆಂಗಳೂರಿನ ರಜಾಜಿ ನಗರದಲ್ಲಿ ನಡೆದ 3ನೇ ವರ್ಷದ ವೀಫಾ ಕಪ್ ಸೌತ್ ಝೋನ್ ಟೇಕ್ವಾಂಡೋ ಚ್ಯಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಆಂಡ್ ಮಾರ್ಶಲ್ ಆರ್ಟ್ ಸೆಂಟರಿನ ವಿದ್ಯಾರ್ಥಿಗಳು ಫೈಟಿಂಗ್ ಮತ್ತು ಪೂಂಸೆ ವಿಭಾಗದಲ್ಲಿ 20 ಚಿನ್ನ ಹಾಗೂ 6 ಬೆಳ್ಳಿ ಪದಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸಬ್ ಜೂನಿಯರ್ ವಿಭಾಗದ 44 ಕೆಜಿ ವಿಭಾಗದ ಫೈಟಿಂಗ್ ಹಾಗೂ ಪೂಂಸೆಯಲ್ಲಿ ಮುಹಮ್ಮದ್ ಆಯಾನ್ 2 ಚಿನ್ನ, 18 ಕೆಜಿ ವಿಭಾಗದಲ್ಲಿ ಮುಹಮ್ಮದ್ ಶಯಾನ್ ಒಂದು ಚಿನ್ನ ಹಾಗೂ ಒಂದು ಬೆಳ್ಳಿ, 32 ಕೆಜಿ ವಿಭಾಗದಲ್ಲಿ ಕೆ ಮುಹಮ್ಮದ್ ಶಾಮಿಲ್ ಎರಡು ಚಿನ್ನ, 34 ಕೆಜಿ ವಿಭಾಗದಲ್ಲಿ ಮುಹಮ್ಮದ್ ಫಾಝಿಲ್ ಎರಡು ಚಿನ್ನ, 24 ಕೆಜಿ ವಿಭಾಗದಲ್ಲಿ ಮುಹಮ್ಮದ್ ಆತೀಫ್ ಎರಡು ಚಿನ್ನ, 30 ಕೆಜಿ ವಿಭಾಗದಲ್ಲಿ ಮುಹಮ್ಮದ್ ಜಾಝಿಲ್ ಎರಡು ಚಿನ್ನ, 26 ಕೆಜಿ ವಿಭಾಗದಲ್ಲಿ ಮುಹಮ್ಮದ್ ನಶಾಲ್ ಎರಡು ಚಿನ್ನದ ಪದಕ ಪಡೆದರೆ, ಜ್ಯೂನಿಯರ್ ವಿಭಾಗದ 51 ಕೆಜಿ ವಿಭಾಗದಲ್ಲಿ ನೌಶಿಕ್ ರಾಜ್ ಫೈಟಿಂಗ್ ಹಾಗೂ ಪೂಂಸೆಯಲ್ಲಿ ಎರಡು ಚಿನ್ನ, 68 ಕೆಜಿ ವಿಭಾಗದಲ್ಲಿ ಮುಹಮ್ಮದ್ ಸುಹೈಲ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ, 40 ಕೆಜಿ ವಿಭಾಗದಲ್ಲಿ ಮುಹಮ್ಮದ್ ಶಫೀಕ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ, 62 ಕೆಜಿ ವಿಭಾಗದಲ್ಲಿ ಪೂಂಸೆಯಲ್ಲಿ ಚಿನ್ನ ಹಾಗೂ ಫೈಟಿಂಗಿನಲ್ಲಿ ಬೆಳ್ಳಿ, 45 ಕೆಜಿ ವಿಭಾಗದಲ್ಲಿ ಯೂಸುಫ್ ಹಫೀಝ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ, 58 ಕೆಜಿ ವಿಭಾಗದಲ್ಲಿ ಮುಹಮ್ಮದ್ ತಮೀಝ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುತ್ತಾರೆ. ಇವರಿಗೆ ಇಸಾಕ್ ನಂದಾವರ ತೆರಬೇತಿ ನೀಡಿರುತ್ತಾರೆ.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...