ಬಂಟ್ವಾಳ: ಎ.18 ರಂದು ನಡೆಯುವ ಲೋಕಸಭಾ ಚುನಾವಣೆಯ ಬಗ್ಗೆ ಹೆಚ್ಚುವರಿ ಭದ್ರತಾ ದೃಷ್ಟಿಯಿಂದ ಮಂಗಳೂರು ಎಸ್.ಪಿ.ಲಕ್ಮೀಪ್ರಸಾದ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮೊಡಂಕಾಪು ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್ ಕೇಂದ್ರ ಕ್ಕೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆ ಯ ಬಗ್ಗೆ ಪೋಲೀಸರೊಂದಿಗೆ ಚರ್ಚೆ ನಡೆಸಿ ಯಾವ ರೀತಿಯ ಕ್ರಮಗಳನ್ನು ಕೈಕೊಳ್ಳಬೇಕು, ಸಮಸ್ಯೆ ಗಳು ಉದ್ಬವವಾಗದ ರೀತಿಯಲ್ಲಿ ಕಾರ್ಯನಿರ್ವಹಿಸುವ ಕುರಿತು ಮಾಹಿತಿ ನೀಡಿದರು.




ಇದೇ ಸಂದರ್ಭದಲ್ಲಿ ಮಾಧ್ಯಮ ದವರ ಜೊತೆ ಮಾತನಾಡಿದ ಎಸ್.ಪಿ.ಲಕ್ಮೀಪ್ರಸಾದ್ ಎಲ್ಲರೂ ಶಾಂತಿರೀತಿಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು.
70 ಸೆಕ್ಟರ್ ಗಳಿಗೆ
287 ಸಿಬ್ಬಂದಿ ಗಳನ್ನು ಹಾಕಲಾಗಿದೆ. ಪೋಲೀಂಗ್ ಬೂತ್ ಮತ್ತು ಸೆಕ್ಟರ್ ಗಳಿಗೆ ಸೇರಿ ಹಾಕಲಾಗಿದೆ.
85 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಅಲ್ಲಿಗೆ ಸಿಬ್ಬಂದಿ ಗಳ ಜೊತೆ ಹೆಚ್ಚು ವರಿಯಾಗಿ ಸಿ.ಆರ್.ಪಿ.ಗಳನ್ನು ಹಾಕಲಾಗಿದೆ.
ಎರಡು ಹೆಚ್ಚುವರಿ ಯಾಗಿ ಬಂಟ್ವಾಳ ಕ್ಕೆ ಕೆ.ಎಸ್.ಆರ್.ಪಿ.ಜೊತೆಗೆ ಹೋಮ್ ಗಾರ್ಡ್ ಸೇರಿದಂತೆ 300 ಸಿಬ್ಬಂದಿ ಗಳು ಕಾರ್ಯನಿರ್ವಹಿಸುತ್ತಾರೆ.
ಇದರಲ್ಲಿ ಎರಡು ಡಿ.ವೈ.ಎಸ್.ಪಿ.ಗಳು ಹಾಗೂ ನಾಲ್ಕು ಪೋಲೀಸ್ ಇನ್ಸ್ ಪೆಕ್ಟರ್ಗಳು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತರೀತಿಯಲ್ಲಿ ಮತದಾನ ಅಗುವಂತೆ ಎಲ್ಲಾ ರೀತಿಯಲ್ಲಿ ಪೋಲೀಸ್ ವ್ಯವಸ್ಥೆ ಮಾಡಲಾಗಿದೆ.
ಮತದಾರರು ಯಾವುದೇ ಭಯವಿಲ್ಲದೆ ಮತದಾನ ಮಾಡುವಂತೆ ಅವರು ಹೇಳಿದರು.