Saturday, July 12, 2025

ಕುಟುಂಬದ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ. ಡಯಾಲಿಸೀಸ್ ಚಿಕಿತ್ಸೆ ಗಾಗಿ ಸಹಾಯ ಹಸ್ತ ಬೇಕಾಗಿದೆ

ಬಂಟ್ವಾಳ: ತನ್ನ ಇಡೀ ಕುಟುಂಬದ ಆಧಾರವಾಗಿದ್ದ ಹೋಟೆಲ್ ಕಾರ್ಮಿಕನೋರ್ವ ಪ್ರಸ್ತುತ ಕಿಡ್ನಿ ವೈಫಲ್ಯದಿಂದ ಸಂಪೂರ್ಣ ನಲುಗಿ ಹೋಗಿದ್ದು, ವಾರಕ್ಕೆ ಮೂರು ಡಯಾಲಿಸೀಸ್ ಚಿಕಿತ್ಸೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ಆನಾರೋಗ್ಯದಿಂದ ಕುಟುಂಬ ಆಹಾರಕ್ಕೂ ಪರದಾಡುವ ಜತೆಗೆ ಡಯಾಲಿಸೀಸ್‌ಗೆ ದುಬಾರಿ ಖರ್ಚು ಮಾಡಬೇಕಾದ ಸ್ಥಿತಿ ಇದ್ದು, ಹೀಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.

ಪಾಣೆಮಂಗಳೂರಿನ ಮೊಗರ್ನಾಡು ನಿವಾಸಿ ೪೨ ವರ್ಷದ ಸತೀಶ್ ಅವರ ಕುಟುಂಬದ ಚಿಂತಾಜನಕ ಸ್ಥಿತಿ ಇದು. ಅದು ಮೆಲ್ಕಾರಿನ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಸಖೀ ಜೀವನ ನಡೆಸುತ್ತಿದ್ದರು. ಆದರೆ ಇವರು ಏಕಾಏಕಿ ಕಿಡ್ನಿ ವೈಫಲ್ಯದ ಖಾಯಿಲೆಗೆ ತುತ್ತಾಗಿ ಪ್ರಸ್ತುತ ಇಡೀ ಕುಟುಂಬವೇ ನಲುಗಿ ಹೋಗಿದೆ.

ಸತೀಶ್ ಅವರು ಮನೆಯಲ್ಲಿ ಹಿರಿಯರಾಗಿದ್ದು, ಇಬ್ಬರು ತಮ್ಮಂದಿರು ಹಾಗೂ ಓರ್ವ ತಂಗಿ ಸೇರಿ ನಾಲ್ವರು ಮನೆಯಲ್ಲಿದ್ದಾರೆ. ತಮ್ಮಂದಿರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಆದರೆ ಮನೆಯ ಖರ್ಚು, ಅಣ್ಣನ ಔಷಽ ಅವರ ದುಡಿಮೆ ಸಾಲುತ್ತಿಲ್ಲ. ಸತೀಶ್ ಅವರಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಡಯಾಲಿಸೀಸ್ ಆಗಬೇಕಿದ್ದು, ಒಮ್ಮೆಗೆ ೧೨೦೦ ರೂ.ಬೇಕಾಗುತ್ತದೆ.

ಜತೆಗೆ ಬಸ್ಸಿನಲ್ಲಿ ಹೋಗಿ ಬರುವ ಖರ್ಚು ಪ್ರತ್ಯೇಕವಾಗಿದ್ದು, ಆದರೆ ಅನಾರೋಗ್ಯದ ಕಾರಣದಿಂದ ಬಸ್ಸಿನಲ್ಲಿ ಹೋಗುವುದಕ್ಕೂ ಪರದಾಡುತ್ತಿದ್ದಾರೆ. ಅವರ ಅನಾರೋಗ್ಯದ ಶಾಶ್ವತ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಬೇಕಿರುವುದರಿಂದ ಇವರ ಕುಟುಂಬ ಅದರ ಗೋಜಿಗೆ ಹೋಗಿಲ್ಲ. ಪ್ರಸ್ತುತ ಡಯಾಲಿಸೀಸ್ ಖರ್ಚಿಗಾದರೂ ಅನುಕೂಲವಾಗಲಿ ಎಂದು ಸಹೃದಯಿ ದಾನಿಗಳ ನೆರವು ಯಾಚಿಸುತ್ತಿದ್ದಾರೆ.

ನೆರವು ನೀಡುವ ದಾನಿಗಳು ಸತೀಶ್ ಅವರ ಹೆಸರಿನಲ್ಲಿ ಕೆನರಾ(ಸಿಂಡಿಕೇಟ್) ಬ್ಯಾಂಕ್ ಶಂಭೂರು ಶಾಖೆಯ ಖಾತೆ ಸಂಖ್ಯೆ 02942610003616 ( IFSC-SYNB0000294 ) ಗೆ ತಮ್ಮ ನೆರವು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅವರ ಮೊ.ಸಂಖ್ಯೆ 6363377405ಯನ್ನು ಸಂಪರ್ಕಿಸಬಹುದಾಗಿದೆ.

More from the blog

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...