7-7-2017ರಂದು ವೀರ ಹುತಾತ್ಮನಾದ ಎನ್. ಶರತ್ ಮಡಿವಾಳ ಇವರ ಬಲಿದಾನದ ಗೌರವಾಥ೯ವಾಗಿ 8.7.2019 ಸೋಮವಾರ, ಬೆಳಿಗ್ಗೆ 9ಗಂಟೆಗೆ ಶರತ್ ಅವರ ಸ್ಮಾರಕದಲ್ಲಿ ಪುಷ್ಪಾಚ೯ನೆಗೈದು ಗಿಡನೆಟ್ಟು, ನಂತರ ಸಜೀಪಮೂಡದ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸಜೀಪ ಮುನ್ನೂರಿನ ಶಾಂತಿನಗರ ಸರಕಾರಿ ಪ್ರಾಥಮಿಕ ಶಾಲೆ ಇದರ ವಠಾರದಲ್ಲಿ ಪುಟಾಣಿ ಮಕ್ಕಳ ಸಹಭಾಗಿತ್ವದಲ್ಲಿ ಹುತಾತ್ಮ ಶರತ್ ಸವಿ ನೆನೆಪಿಗಾಗಿ ಹುತಾತ್ಮ ಶರತ್ ಅಭಿಮಾನಿ ಬಳಗದ ವತಿಯಿಂದ ವನಮಹೋತ್ಸವ ಮತ್ತು ಪುಟಾಣಿ ಮಕ್ಕಳಿಗೆ ಕೊಡೆ ವಿತರಣೆ ಮಾಡುವ ಮೂಲಕ ಹುತಾತ್ಮ ಬಲಿದಾನ ದಿವಸವನ್ನಾಗಿ ಅಚರಿಸಲಾಯಿತು.


ಶ್ರೀಕೃಷ್ಣ ಶಿಶುಮಂದಿರ, ಶಾಂತಿನಗರ ಸರಕಾರಿ ಶಾಲೆ ಮತ್ತು ಶಾಂತಿನಗರ ಅಂಗನವಾಡಿ ಕೇಂದ್ರದ ಎಲ್ಲಾ ಮಕ್ಕಳಿಗೂ ಶರತ್ ಸವಿ ನೆನಪಿಗಾಗಿ ಕೊಡೆ ವಿತರಿಸಲಾಯಿತು.
ಹುತಾತ್ಮನ ಸ್ಮರಣೆಯ ಈ ಪುಣ್ಯಕಾಯ೯ದಲ್ಲಿ ಶರತ್ ಅವರ ತಂದೆ ತನಿಯಪ್ಪ ಮಡಿವಾಳ, ಧಮ೯ ಜಾಗರಣ ಜಿಲ್ಲಾ ಸಂಯೋಜಕ್ ಸಚಿನ್ ಮೆಲ್ಕಾರ್, ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ನಿದೇ೯ಶಕರಾದ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ವಿಶ್ವಹಿಂದೂ ಪರಿಷತ್ ವಿಟ್ಲ ಪ್ರಖಂಡದ ಕಾಯಾ೯ಧ್ಯಕ್ಷ ಪದ್ಮನಾಭ ವಿಟ್ಲ, ವಿಶ್ವ ಹಿಂದೂ ಪರಿಷತ್ ನಾಯಕ ಲೋಹಿತ್ ಪಣೋಲಿಬೈಲು, ಚರಣ್ ಗಟ್ಟಿ ಮಾನ೯ಬೈಲು, ವಿಶ್ವನಾಥ ಪೂಜಾರಿ ಮತಾ೯ಜೆ, ಸದಾನಂದ ಸುವಣ೯, ಪುರುಷೋತ್ತಮ ಪೂಜಾರಿ ಮಿತ್ತಕಟ್ಟ, ಭಜರಂಗದಳ ಮುಖಂಡ ದೀಪಕ್ ಕೋಟ್ಯಾನ್ ಸಜೀಪ, ರವೀಂದ್ರ ಕಂದೂರು ಹಾಗೂ
ಸಹೃದಯಿ ಶರತ್ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮ ಸ್ವಯಂಸೇವಕನ ಗೌರವಾಥ೯ವಾಗಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು.