ಬಂಟ್ವಾಳ: ಅಮಾಯಕರನ್ನು ಭಯೋತ್ಪಾದಕರನ್ನಾಗಿಸುವ ಕೆಲವು ಮಾಧ್ಯಮ ಭಯೋತ್ಪಾದನೆಯ ವಿರುದ್ಧ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಸಮಿತಿ ವತಿಯಿಂದ ಆ.30ರಂದು ಸಂಜೆ 4ಕ್ಕೆ ಪ್ರತಿಭಟನಾ ಸಭೆಯು ಬಿ.ಸಿ.ರೋಡ್‌ನ ಕೈಕಂಬ ಜಂಕ್ಷನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.