Friday, January 30, 2026

ಎಸ್ಕೆಎಸೆಸೆಫ್ ವಿಖಾಯದ ದ.ಕ. ಜಿಲ್ಲಾ ಸಮಿತಿಯ ವಿಖಾಯ ತರಬೇತಿ

ಬಂಟ್ವಾಳ: ಎಸ್ಕೆಎಸೆಸೆಫ್ ವಿಖಾಯದ ದ.ಕ. ಜಿಲ್ಲಾ ಸಮಿತಿಯ ವಿಖಾಯ ತರಬೇತಿ ಶಿಬಿರವು ರವಿವಾರ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.
ಎಸ್ಕೆಎಸೆಸೆಫ್ ವಿಖಾಯ ಜಿಲ್ಲಾ ಜನರಲ್ ಕನ್ವೀನರ್ ಮುಸ್ತಫಾ ಕಾಂದ್ರೋಡಿ ಕಟ್ಟದಪಡ್ಪು ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ಕಾರ್ಯಕ್ರಮ ಉದ್ಘಾಟಿಸಿ ವಿಖಾಯ ಸದಸ್ಯರಿಗೆ ತರಬೇತಿ ನೀಡಿದರು. ವಕೀಲ ಜಲೀಲ್ ನಂದಾವರ ಅವರು ಕಾನೂನು ಮತ್ತು ಟ್ರಾಫಿಕ್, ಸಪ್ವಾನ್ ಪೈಝಿ ಅವರು ಮೆಡಿಟೇಷನ್ ಹಾಗೂ ಎಸ್ಕೆಎಸೆಸೆಫ್ ವಿಖಾಯ ಕೇಂದ್ರ ಸಮಿತಿಯ ಜನರಲ್ ಕನ್ವೀನರ್ ಸಲ್ಮಾನ್ ಪೈಝಿ ಸಂಘಟನೆ, ವಿಖಾಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಶರಬಿಲ್ ಅವರು ಪ್ರಥಮ ಚಿಕಿತ್ಸಾ ವಿಷಯದ ಕುರಿತು ತರಬೇತಿ ನೀಡಿದರು.

ಎಸ್ಕೆಎಸೆಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾಧ್ಯಕ್ಷರಾದ ಖಾಸಿಂ ದಾರಿಮಿ, ಜಿಲ್ಲಾ ಉಸ್ತುವಾರಿ ಶರೀಫ್ ಕಕ್ಕಿಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಂಟ್ವಾಳ ವಲಯಧ್ಯಕ್ಷ ಇರ್ಷಾದ್ ದಾರಿಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ವಿಖಾಯ ಕೋಶಾಧಿಕಾರಿ ಹಸೈನಾರ್ ಉರುಮಣೆ, ವರ್ಕಿಂಗ್ ಕನ್ವೀನರ್ ಶಾಕೀರ್ ಮಳಲಿ, ಸಂಘಟನಾ ಕಾರ್ಯದರ್ಶಿ ಮನ್ಸೂರ್ ಮೌಲವಿ ಅಮ್ಚಿನಡ್ಕ, ಬಂಟ್ವಾಳ ವಲಯ ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷ ಅಲ್ತಾಫ್, ವಲಯ ವಿಖಾಯ ಕನ್ವೀನರ್ ಅಬ್ದುಲ್ ರಹಿಮಾನ್ ಕೊಡಂಗೆ, ಅಕ್ಬರ್ ಅಲಿ ಅಡ್ಡೂರು, ಸೈಬರ್‌ವಿಂಗ್ ರಾಜ್ಯಾಧ್ಯಕ್ಷ ಸಫ್ವಾನ್ ಬಂಟ್ವಾಳ, ವಿಖಾಯ ಆಕ್ಟೀವ್ ವಿಂಗ್ ಸದಸ್ಯ ಶಾಕೀರ್ ಶಾಂತಿಅಂಗಡಿ, ನಾಸಿರ್ ಶಾಂತಿಅಂಗಡಿ, ಬಿ.ಸಿ.ರೋಡ್ ಕ್ಲಸ್ಟರ್ ವಿಖಾಯ ಕನ್ವೀನರ್ ರಹಿಮಾನ್ ಭಾಗವಹಿಸಿದ್ದರು. ಎಸ್ಕೆಎಸೆಸೆಫ್ ವಿಖಾಯ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ಬಶೀರ್ ಮಜಲು ಸ್ವಾಗತಿಸಿದರು.

More from the blog

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ : ಷರತ್ತುಗಳೇನು?

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರಿಗೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ...

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...

ವಿಟ್ಲ ಜಾತ್ರೆ ಅಂಗಡಿ ಏಲಂನಲ್ಲಿ ಭಾರೀ ಅವ್ಯವಹಾರದ ದೂರು..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಅಂಗಡಿ ಏಲಂನ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಕೆ. ಎಂಬವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಜಾತ್ರೆಗೆ ಸಂತೆ...