ವಿಟ್ಲ: ಪುಣಚ ಗ್ರಾಮದ ಮಣಿಲದ ಸಿಂಚನಾ ಎಂ.ಎಸ್. ಅವರು ಜೂನ್ ತಿಂಗಳಲ್ಲಿ ನಡೆದ ಸಿಎಸ್‌ಐಆರ್-ನೆಟ್(ಲೆಕ್ಚರ್‌ಶಿಪ್) ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ದೇಶದಲ್ಲಿಯೇ ೨೧ನೇ ರ್‍ಯಾಂಕ್ ಪಡೆದಿದ್ದಾರೆ.
ಈಕೆ ೨೦೧೯ರಲ್ಲಿ ನಡೆದ ಗೇಟ್(ಗ್ರಾಜ್ಯುಏಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್)ನಲ್ಲಿ ರಾಷ್ಟ್ರಕ್ಕೆ ೧೧೯೮ನೇ ರ್‍ಯಾಂಕ್ ಮತ್ತು ಕೆಎಸ್‌ಇಟಿ (ಕರ್ನಾಟಕ ಸ್ಟೇಟ್ ಎಲಿಜಿಬಿಲಿಟಿ ಟೆಸ್ಟ್)ನಲ್ಲಿ ೨೦೧೯ರಲ್ಲಿ ಉತ್ತೀರ್ಣರಾಗಿದ್ದಾರೆ. ಶಿ-ಇನ್‌ಸ್ಪೈರ್ ಸ್ಕಾಲರ್‌ಶಿಪ್‌ಅನ್ನು ಕೂಡಾ ಆಕೆ ಪಡೆದಿದ್ದರು.
ಈಕೆ ಪುಣಚ ಪರಿಯಾಲ್ತಡ್ಕ ಹಿ.ಪ್ರಾ ಶಾಲೆ ಮತ್ತು ಪುತ್ತೂರು ಮಾಯಿದೆ ದೇವುಸ್ ಹಿ ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸಂತ ಫಿಲೋಮಿನ ಪ.ಪೂ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ಸಂತ ಫಿಲೋಮಿನ ಪದವಿ ಕಾಲೇಜಿನಲ್ಲಿ ಪದವಿ, ಮಂಗಳಗಂಗೋತ್ರಿ ಕೊಣಾಜೆ ವಿವಿಯಲ್ಲಿ ಎಂ.ಎಸ್ಸಿ. ಶಿಕ್ಷಣವನ್ನು ಪಡೆದಿದ್ದಾರೆ.
ಈಕೆ ಪುತ್ತೂರು ಮಾಯಿದೆ ದೇವುಸ್ ಹಿ.ಪ್ರಾ ಶಾಲೆಯ ಶಿಕ್ಷಕ, ಪುಣಚ ಗ್ರಾಮದ ಮಣಿಲ ಸುಬ್ಬರಾಜ ಶಾಸ್ತ್ರಿ ಮತ್ತು ಜ್ಯೋತಿ ದಂಪತಿಯ ಪುತ್ರಿ.
