ಬಂಟ್ವಾಳ: ಸಿಡಿಲು ಬಡಿದು ಮೂರು ತೆಂಗಿನ ಮರ ಸುಟ್ಟು ಮನೆ ಗೊಡೆ ಬಿರುಕು ಬಿಟ್ಟ ಘಟನೆ ಸಜೀಪ ಮುನ್ನೂರು ಅಲಾಡಿ ಎಂಬಲ್ಲಿ ನಡೆದಿದೆ.
ಗ್ರಾ.ಪಂ.ಗೆ ಈ ಬಗ್ಗೆ ವರದಿ ನೀಡಿದ್ದು
ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಬುಧವಾರ ರಾತ್ರಿ ಸುರಿದ ಬಾರಿ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಸಜೀಪ ಮುನ್ನೂರು ಗ್ರಾಮದ ಅಲಾಡಿ ನಿವಾಸಿ ರುಕ್ಮುಯ ಪೂಜಾರಿ ಅವರ ಮನೆಯ ಪಕ್ಕದಲ್ಲಿ ದ್ದ ಮೂರು ತೆಂಗಿನ ಮರಗಳು ಸುಟ್ಟು ಹೋಗಿವೆ, ಮನೆಯೊಳಗೆ ಗೋಡೆ ಬಿರುಕು ಬಿಟ್ಟಿದೆ, ಮನೆಯ ವಿದ್ಯುತ್ ವಯರ್ ಗಳು ಸಂಪೂರ್ಣ ವಾಗಿ ಕೆಟ್ಟು ಹೋಗಿವೆ ಸ್ವಿಚ್ ಬೋರ್ಡುಗಳು ಸುಟ್ಟು ಹೋಗಿವೆ. ಮನೆಯವರಿಗೆ ಯಾವುದೇ ರೀತಿಯ ಅಪಾಯಗಳು ಸಂಭವಿಸಿಲ್ಲ.
ಅದೇ ಹೊತ್ತಿನಲ್ಲಿ ಇವರ ಮನೆಯ ದನ ಕರು ಹಾಕಿದ್ದು , ಸಿಡಿಲಿನ ಅಪಘಾತಕ್ಕೆ ಕರು ಅಸೌಖ್ಯದಿಂದ ಕೂಡಿದೆ.
ಪ್ರಸ್ತುತ ಕರು ಮಲಗಿದ ಸ್ಥಿತಿಯಲ್ಲಿ ಇದೆ.