ಬಂಟ್ವಾಳ: ಯಕ್ಷಾಭಿಮಾನಿಗಳು ಸಿದ್ದಕಟ್ಟೆ-ರಾಯಿ ಇವರಿಂದ ಹಿರಿಯ ಯಕ್ಷಗಾನ ಅರ್ಥಧಾರಿ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿ. ರಮೇಶ್ ಭಟ್ ಮಾದೇರಿ ಅವರ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಜೂ.30ರಂದು ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ತಾಳಮದ್ದಳೆ ಅತಿಕಾಯ ಮೋಕ್ಷದಲ್ಲಿ ಹಿಮ್ಮೇಳದಲ್ಲಿ ಪ್ರಸಾದ್ ಬಲಿಪ, ಚಂದ್ರಶೇಖರ ಕೊಂಕಣಾಜೆ, ಶ್ರೀಧರ ಪಡ್ರೆ, ಸತ್ಯಜಿತ್ ರಾವ್, ಮುಮ್ಮೇಳದಲ್ಲಿ ಶಂಭು ಶರ್ಮ, ಅಶೋಕ್ ಭಟ್ ಉಜಿರೆ, ಪ್ರೇಮ್ ರಾಜ್ ಕೊಲ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರಿರಾಜ್ ಕಟೀಲು ಭಾಗವಹಿಸಲಿರುವರು ಎಂದು ಸಂಘಟಕ ಹರಿಪ್ರಸಾದ್ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

