ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತೊಮ್ಮೆ ಸಾಬೀತು ಪಡಿಸಿಕೊಂಡು ಅವರ ಕೈ ಬಲ ಪಡಿಸಿರುವುದಕ್ಕೆ ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕುಲಾಲ್ ನೇತೃತ್ವದಲ್ಲಿ ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮ ಆಚರಿಸಿದರು.
ಸಂಭ್ರಮಾಚರಣೆಯಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಪೂಜಾರಿ, ಸುನೀಲ್ ಶೆಟ್ಟಿಗಾರ್, ಬಿಜೆಪಿ ಯುವ ಮೋರ್ಚಾ ನಾಯಕ ದೀಪಕ್ ಶೆಟ್ಟಿಗಾರ್,ಸಿ. ಎ. ಬ್ಯಾಂಕ್ ಮಾಜಿ ನಿರ್ದೇಶಕರಾದ ದೇವರಾಜ್ ಸಾಲಿಯನ್, ರಾಜೇಶ್ ಶೆಟ್ಟಿ ಕೊನೆರಬೆಟ್ಟು,ಉಮೇಶ್ ಗೌಡ, ಮಾಧವ ಶೆಟ್ಟಿಗಾರ್,ಬಿಜೆಪಿ ಮಂಡಲ ಕಾರ್ಯಕಾರಿಣಿ ಸದಸ್ಯರಾದ ಚಂದ್ರಶೇಖರ ಕರ್ಪೆ, ಕರ್ಪೆ ಗ್ರಾಮ ಬೂತ್ ಅಧ್ಯಕ್ಷ ಭಾಸ್ಕರ್ ಪ್ರಭು,ಪ್ರಮುಖರಾದ ಭೋಜ ಶೆಟ್ಟಿಗಾರ್, ಚೇತನ್ ಕುಲಾಲ್,ದೇವಪ್ಪ ಗೌಡ,ಅಮ್ಮಣ್ಣ ಪೂಜಾರಿ,ನಿತ್ಯಾನಂದ ಕುಲಾಲ್, ಸೇಸಪ್ಪ ದೇವಾಡಿಗ,ತಿಮ್ಮಪ್ಪ ಪೂಜಾರಿ ಕೊಯಿಲ, ಸಂಜೀವ ಪೂಜಾರಿ ಅನೈದೋಡಿ,ಲಿಂಗಪ್ಪ ಸಂಗಬೆಟ್ಟು, ಬೂಬ ಶೆಟ್ಟಿಗಾರ್, ಪವನ್ ಶೆಟ್ಟಿಗಾರ್,ಹರೀಶ್ ಪಲ್ಲೆದಕಾಡು ಮತ್ತಿತರರು ಉಪಸ್ಥಿತರಿದ್ದರು..

