Monday, February 2, 2026

ಸಿದ್ಧಕಟ್ಟೆ ರೋಟರಿ ಕ್ಲಬ್‌ನಿಂದ ಚಾರ್ಟರ್ ಪ್ರೆಸೆಂಟೇಷನ್ – ಹಕ್ಕು ಪತ್ರ ವಿತರಣೆ

ಸಿದ್ಧಕಟ್ಟೆ: ಇಲ್ಲಿನ ಸೈಂಟ್ ಪ್ಯಾಟ್ರಿಕ್ ಚರ್ಚ್ ಸಭಾಭವನದಲ್ಲಿ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇದರ ಚಾರ್ಟರ್ ಪ್ರೆಸೆಂಟೇಷನ್ – ಹಕ್ಕು ಪತ್ರ ವಿತರಣಾ ಸಮಾರಂಭ ನಡೆಯಿತು.

ಸೈಂಟ್ ಪ್ಯಾಟ್ರಿಕ್ ಚರ್ಚಿನ ಧರ್ಮಗುರು ಫಾದರ್ ಡೇನಿಯಲ್ ಡಿಸೋಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಜಿಲ್ಲೆ 3181ನ ಗವರ್ನರ್ ರೊ.ಮೇಜರ್ ಡೋನರ್ ಎಂ.ರAಗನಾಥ ಭಟ್ ಚಾರ್ಟರ್ ವಿತರಿಸಿದರು.

ಡಿ.ಜಿ.ಇ ರವೀಂದ್ರ ಭಟ್, ಡಿ.ಜಿ.ಎನ್. ಪ್ರಕಾಶ್ ಕಾರಂತ್, ಎ.ಜಿ ಗಳಾದ ಯತಿ ಕುಮಾರಸ್ವಾಮಿ ಗೌಡ, ಸುರೇಂದ್ರ ಕಿಣಿ, ವಿ.ಎಸ್.ದತ್ತ, ಜವರೇಗೌಡ, ವಿವಿಧ ರೋಟರಿ ಕ್ಲಬ್ಬಿನ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸಂಗಬೆಟ್ಟು ಅಧ್ಯಕ್ಷರಾದ ಸತೀಶ್ ಪೂಜಾರಿ ಅಳಕೆ, ವಿಶೇಷ ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಚುನಾಯಿತರಾದ ರೋಟೇರಿಯನ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿಶೇಷ ಸೇವಾ ಕಾರ್ಯವಾಗಿ ಗ್ರಾಮ ಪಂಚಾಯತ್ ಸಂಗಬೆಟ್ಟಿಗೆ ಆಸನದ ವ್ಯವಸ್ಥೆ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಲಾಯಿತು. ಗುಂಡೂರಿ ಸೇವಾಶ್ರಮಕ್ಕೆ ಶೀಟ್ ಅಳವಡಿಕೆ ಮತ್ತು ಒಂದು ದಿನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಿದ್ಧಕಟ್ಟೆಯ ಹೆಸರನ್ನು ಬೆಳಗಿದ ಕುಮಾರಿ ರಮ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಸಿದ್ಧಕಟ್ಟೆ ಕ್ಲಬ್ಬಿನ ಸ್ಥಾಪನೆಗೆ ಕಾರಣರಾದ ಮೂಡಬಿದ್ರೆ ರೋಟರಿ ಅಧ್ಯಕ್ಷರಾದ ಡಾಕ್ಟರ್ ಸುದೀಪ್, ಜಿ.ಎಸ್.ಆರ್ ಜೆರಾಲ್ಡ್ ಡಿಕೋಸ್ತ, ಕಾರ್ಯದರ್ಶಿಗಳಾದ ಅರವಿಂದ ಕಿಣಿ ಇವರನ್ನು ಸನ್ಮಾನಿಸಲಾಯಿತು. ಸಿದ್ಧಕಟ್ಟೆ ರೋಟರಿ ಸಮುದಾಯ ದಳದ ಅಧ್ಯಕ್ಷರಾಗಿದ್ದ ಮಧ್ವರಾಜ್ ಜೈನ್ ಮತ್ತು ಕಾರ್ಯದರ್ಶಿಗಳಾಗಿದ್ದ ಭರತ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಸಿದ್ಧಕಟ್ಟೆ ರೋಟರಿ ಅಧ್ಯಕ್ಷ ಮೈಕಲ್ ಡಿಕೋಸ್ತ ಮತ್ತು ಜ್ಯೋತಿ ದಂಪತಿಯ ಮದುವೆ ವಾರ್ಷಿಕೋತ್ಸವ ಆಚರಿಸಲಾಯಿತು. ಮೂಡುಬಿದರೆ ರೋಟರಿ ಅಧ್ಯಕ್ಷ ರೊ. ಡಾ.ಸುದೀಪ್ ಸ್ವಾಗತಿಸಿ, ಸಿದ್ಧಕಟ್ಟೆ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರೊ. ರಾಜೇಶ್ ನೆಲ್ಯಾಡಿ ವಂದಿಸಿದರು. ರೊ. ದಿನೇಶ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

More from the blog

ಬಂಟ್ವಾಳ : ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು...

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೊಸ ಬೈಲಾದಂತೆ ಅಭಿವೃದ್ಧಿ ಶುಲ್ಕ : ಸಾಮಾನ್ಯ ಸಭೆ ಸ್ಪಷ್ಟನೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜ.31ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಗೆ ಬಂದ ಅಭಿವೃದ್ಧಿ ಶುಲ್ಕ ದ ಸುತ್ತೋಲೆಯ...

ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಭೇಟಿ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಇಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ಬಗ್ಗೆ...

ಮಿತ್ತೂರು: ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ : ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ...