ಸಿದ್ಧಕಟ್ಟೆ : ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಭೋಜನಾಲಯ ಹಾಗೂ ಬಯಲು ರಂಗಮಂಟಪಕ್ಕೆ ಶಂಕು ಸ್ಥಾಪನೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ದಮೋದರ ರಾವ್ ಪ್ರಪ್ರಥಮ ಮುಖ್ಯೋಪಾಧ್ಯಯರು ಸರಕಾರಿ ಪ್ರೌಢಶಾಲಾ ಸಿದ್ಧಕಟ್ಟೆ ಇವರು ನೇರವೇರಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶ್ ಆಚಾರ್ಯ ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಪೂಂಜ ಇವರು ನಡೆಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ್ ಗೌಡ ಇವರು ವಹಿಸಿದರು. ಶಾಲಾ ಉಪಪ್ರಾಂಶುಪಾಲರು ಲೋನಾ ಲೋಬೊ ಇವರು ಪ್ರಾಸ್ತವಿಕ ಮಾತನ್ನು ಆಡಿದರು.
ಶಾಲಾ ಪ್ರಾರಂಭಕ್ಕೆ ಕಾರಣೀಕರ್ತರಾದ ಅರ್ಕಕೀರ್ತಿಯವರು ಈ ಶಾಲೆಯ ಪ್ರಾರಂಭಿಸಿದ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ವಿವರಿಸಿದರು ಮತ್ತು ಶಾಲೆ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ದಮೋದರ ರಾವ್ ಇವರು ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರ್ಕಕೀರ್ತಿ ಇಂದ್ರ, ಮೈಕಲ್ ಡಿ’ಕೋಸ್ತ ರಾಘವೇಂದ್ರ ಭಟ್, ಸುರೇಶ್ ಶೆಟ್ಟಿ ವಕೀಲರು, ಕಿರಣ್ ಮಂಜಿಲ, ವಸಂತ ಕುಮಾರ್ ಅಣ್ಣಳಿಕೆ, ಪ್ರಭಾಕರ ಪ್ರಭು, ಶೇಖರ ಶೆಟ್ಟಿ, ದೇಜಪ್ಪ ಕರ್ಕೇರ ಗ್ರಾಮ ಪಂಚಾಯತ್ ಸದಸ್ಯರು ಸಂಗಬೆಟ್ಟು, ಚಂದ್ರ ಕೋರ್ಯರು ಗ್ರಾಮ ಪಂಚಾಯತ್ ಸದಸ್ಯರು ಕುಕ್ಕಿಪಾಡಿ, ಸುರೇಂದ್ರ ಗ್ರಾಮ ಪಂಚಾಯತ್ ಸದಸ್ಯರು ಆರಂಬೋಡಿ, ಸುರೇಶ್ ಕುಲಾಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಂಗಬೆಟ್ಟು ಉಪಸ್ಥತರಿದ್ದರು. ಎಸ್.ಡಿ.ಎಂ.ಸಿ ಸದಸ್ಯರು ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.