Sunday, July 13, 2025

ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ಧಕಟ್ಟೆ- ಮತದಾರರ ಜಾಗೃತಿ ಪ್ರಭಾತ ಫೇರಿ

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಮತದಾರರ ಸಾಕ್ಷರತಾ ಸಂಘ, ರೋಟರ್‍ಯಾಕ್ಟ್ ಕ್ಲಬ್, ರೋವರ್‍ಸ್ & ರೇಂಜರ್‍ಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಮತದಾರರ ಜಾಗೃತಿ ಕುರಿತ ಪ್ರಭಾತ ಫೇರಿ ನಡೆಸಲಾಯಿತು.
ಪೂರ್ವಾಹ್ನ 9 ಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ ಜೊತೆಯಾಗಿ ಪ್ರಥಮ ದರ್ಜೆ ಕಾಲೇಜಿನ ಆವರಣದಿಂದ ಹೊರಟು ಸಿದ್ಧಕಟ್ಟೆಯ ಸುತ್ತಮುತ್ತಲಿನ ಮಂಚಕಲ್ಲು, ಮೇಲುಗುಡ್ಡೆ ಹಾಗೂ ಅಜ್ಜಿಬಾಕ್ಯಾರು ಪ್ರದೇಶಗಳಲ್ಲಿ ಮತದಾರರ ಜಾಗೃತಿ ಮೆರವಣಿಗೆ ನಡೆಸಲಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಮಾಹಿತಿ ಒದಗಿಸಿದರು. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ನೋಂದಾಯಿಸಲು ಹುರಿದುಂಬಿಸಲಾಯಿತು. ಮತದಾರರ ಪಟ್ಡಿಯಲ್ಲಿನ ನೋಂದಾಯಿತ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರೇರೇಪಿಸಲಾಯಿತು. ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಘೋಷಣೆಗಳು, ಪ್ಲಕಾರ್ಡ್ ಹಾಗೂ ಬ್ಯಾನರ್‌ಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮರಳಿ ಕಾಲೇಜಿನ ಆವರಣವನ್ನು ತಲುಪಿರುತ್ತಾರೆ.

More from the blog

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ..

ಪೊಳಲಿ: ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆಯಂದು ಹಿಂದಿನಿAದಲು ಜಗತಿನಾಧ್ಯಂತ ಆಚರಣೆಯನ್ನು ಮಠ ಆಶ್ರಮಗಳಲ್ಲಿ ಆಚರಿಸುತ್ತ ಬಂದಿರುತ್ತಾರೆ. ಹಿಂದುಗಳಿಗಲ್ಲದೆ ಬೇರೆ ಸಾಂಪ್ರದಾಯದವರಿಗೂ ವೀಶೇಷ ಗುರುಪೂರ್ಣಿಮೆದಿನವಾಗಿರುತ್ತದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮಿಜಿಯವರು...

ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಕೈಕಂಬ: ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು ೬ರಂದು ಭಾನುವಾರ ಪುಂಚಮೆ ಶ್ರೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತರಾದ ಪೊಳಲಿ...

ನೆಟ್ಲಮುಡ್ನೂರು : ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜನಜಾಗೃತಿ ಅಭಿಯಾನ..

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ "ಜನಜಾಗೃತಿ ಅಭಿಯಾನ" ನೇರಳಕಟ್ಟೆಯಲ್ಲಿ ಶನಿವಾರ ಸಂಜೆ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ...

ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಿದೆ – ಭರತ್ ಮುಂಡೋಡಿ..

ಬಂಟ್ವಾಳ: ಬಡವರ ಉದ್ಧಾರ, ಮಹಿಳಾ ಸ್ವಾವಲಂಬನೆಯ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದ.ಕ.ಜಿಲ್ಲೆಯಲ್ಲಿ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಯೋಜನಾ ವ್ಯಾಪ್ತಿಗೆ ತರಲಾಗಿದೆ. ಪ್ರಸ್ತುತ ಶಕ್ತಿ ಯೋಜನೆಯ...