Monday, January 26, 2026

ಗ್ರಂಥಾಲಯ ದಿನಾಚರಣೆ

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಗ್ರಂಥಾಲಯ ವಿಭಾಗದಿಂದ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಮ ಕೆ, ಹಿರಿಯ ಶ್ರೇಣಿ ಗ್ರಂಥಪಾಲಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ಓದುವಿಕೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಜ್ಞಾನವನ್ನು ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಮತ್ತು ಆಧುನಿಕ ಗ್ರಂಥಾಲಯದ ಪಿತಾಮಹರಾಗಿರುವ ಡಾ. ಎಸ್.ಆರ್ ರಂಗನಾಥನ್ ಇವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್, ಇವರು ಮಾತನಾಡಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರ ಜೊತೆಗೆ ವಾರ್ತಾ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಸುತ್ತದೆ ಎಂದರು.
ಗ್ರಂಥಪಾಲಕರಾದ ಶ್ರೀನಿವಾಸ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯೂಎಸಿ ಸಂಚಾಲಕರಾದ ಸೌಮ್ಯ ಹೆಚ್.ಕೆ, ಉಪನ್ಯಾಸಕರಾದ ನಸೀಮಾ ಬೇಗಂ,ಎಸ್, ಹನುಮಂತಯ್ಯ ಜಿ.ಹೆಚ್, ದೇವಿಪ್ರಸಾದ್, ರಂಗನಾಥ್ ಉಪಸ್ಥಿತರಿದ್ದರು.
ಸುಶ್ಮಿತ ಮತ್ತು ರಕ್ಷಿತ ಪ್ರಾರ್ಥಿಸಿ, ದ್ವಿತೀಯ ಬಿಕಾಂ ಪ್ರಜ್ವಲ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮೆಲ್ಡ್ರೀಯಾ ಡೀನ ಕ್ಯಾಸ್ತೆಲಿನೊ ತೃತೀಯ ಬಿಕಾಂ ನಿರೂಪಿಸಿ ಪ್ರಥಮ ಬಿಎ ಸುಭಾಸ್ ಬಂಗೇರ ವಂದಿಸಿದರು.

More from the blog

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...

ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು – ವಜ್ರದೇಹಿ ಶ್ರೀ

ವಿಟ್ಲ: ಹಿಂದು ಸಮಾಜ ಪ್ರಸಕ್ತ ಪರಿಸ್ಥಿತಿಯಲ್ಲೂ ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳು ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಜಾತಿ ಸಮುದಾಯಗಳು ಒಟ್ಟಾಗಿ ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು. ಹೀಗಾದಾಗ ಮಾತ್ರ ರಾಜಕೀಯ ಷಡ್ಯಂತ್ರಗಳನ್ನು ಮೆಟ್ಟಿ ಮುನ್ನಡೆಯ...