ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಬೀದಿ ಬೀದಿಯಲ್ಲಿ ವ್ಯಾಪಾರ ಮಾಡಲು ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಪುರಸಭಾ ಅಧಿಕಾರಿಗಳಿಗೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಅವರು ಪತ್ರ ಬರೆದಿದ್ದಾರೆ.
ಕೊರಾನೊ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ಸಂತೆ ಅಥವಾ ಬೀದಿಯಲ್ಲಿ ವ್ಯಾಪಾರ ಮಾಡಲು ಸರಕಾರ ನಿಷೇಧಿಸಲಾಗಿದೆ.
ಆದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಬೀದಿಯಲ್ಲಿ ವ್ಯಾಪಾರಗಳು ಭರದಿಂದ ನಡೆಯುತ್ತಿದೆ.


ಅಜಾಗರೂಕತೆಯಿಂದ ಜನರು ಗುಂಪು ಸೇರಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಕೊರೊನಾ ಹರಡುವುದಕ್ಕೆ ಕಾರಣವಾಗಬಹುದು .ಹಾಗಾಗಿ ಪುರಸಭೆ ಅವಕಾಶ ನೀಡಬಾರದು ಎಂದು ಅವರು ಪತ್ರ ಮುಖೇನ ತಿಳಿಸಿದ್ದಾರೆ.
ನಾಳೆಯಿಂದ ಬಿಗಿ
ಸರಕಾರದ ಹೊಸ ಮಾರ್ಗಸೂಚಿಯಂತೆ ನಾಳೆಯಿಂದ ಹೆಚ್ಚು ಬಿಗಿಗೊಳಿಸುವ ಬಗ್ಗೆಯೂ ಅವರು ತಿಳಿಸಿದ್ದಾರೆ.
ಅಂಗಡಿಗಳಲ್ಲಿ ಅಥವಾ ಬ್ಯಾಂಕ್ ಗಳಲ್ಲಿ ಒಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ವ್ಯವಹಾರ ನಡೆಸುವ ಮುಖ್ಯಸ್ಥರ ಮೇಲೆ ಕ್ರಮಕೈಗೊಳ್ಳಲಿದ್ದೇವೆ. ಅನಾವಶ್ಯಕವಾಗಿ ತಿರುಗಾಟ ನಡೆಸುವ ವಾಹನ ಸವಾರರಿಗೂ ಈ ಹಿಂದಿಗಿಂತ ಹೆಚ್ಚು ಬಿಗಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೀದಿ ಬೀದಿಯಲ್ಲಿ ವ್ಯಾಪಾರ ಮಾಡುವರಿಗೂ ಹೆಚ್ಚಿನ ಬಿಗಿ ಮಾಡಲಾಗುತ್ತದೆ.












