ಬಂಟ್ವಾಳ: ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಪೋಲೀಸ್ ಲೈನ್ ಬಿಸಿರೋಡು ಇದರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಮಹೋತ್ಸವ ಕಾರ್ಯಕ್ರಮ ಫೆ. 16 ರಿಂದ 23 ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ಇಂದು ಹಸಿರು ಹೊರೆ ಕಾಣಿಕೆ ನಡೆಯಿತು.

ಬ್ರಹ್ಮಕಲಶೋತ್ಸವ ಅಂಗವಾಗಿ ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದಿಂದ ಕ್ಷೇತ್ರದ ವರೆಗೆ ಹಸಿರುವಾಣಿ ಹೊರೆ ಕಾಣಕೆ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು.
ಹಸಿರುಹೊರೆಕಾಣಿಕೆ ಮೆರವಣಿಗೆಯನ್ನು ಶ್ರೀ ರಾಮಕೃಷ್ಣ ತಪೋವನ ಪೊಳಲಿ ಇಲ್ಲಿಯ ಶ್ರೀ ಶ್ರೀ ವಿವೇಜ ಚೈತನ್ಯಾಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕುರಿಯಾಳ ರಘನಾಥ ಪಯ್ಯಡೆ ಹಾಗೂ ಉದ್ಯಮಿ ರಘ ಸಪಲ್ಯ ಅವರು ಉದ್ಘಾಟಲಿಸಿದರು.
ವಾಹನಗಳು ಹಸಿರು ಹೊರೆಕಾಣಿಕೆಯಲ್ಲಿ ಕುಣಿತ ಭಜನೆ,ಚೆಂಡೆ, ಬ್ಯಾಂಡ್ ವಾದ್ಯ, ಗೊಂಬೆ ಕುಣಿತ ವಿಶೇಷ ಆಕರ್ಷಣೆಯಾಗಿತ್ತು
ಫೆ. 16 ರಿಂದಫೆ.23 ರವರೆಗೆ ನಿತ್ಯ ವೈಧಿಕ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಜೀರ್ಣೊಧ್ದಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಸಹಿತ ವಿವಿಧ ಸಮಿತಿಯ ಪ್ರಮುಖರು, ಊರಿನ ಗಣ್ಯರು ಹಾಗೂ ವಿವಿಧ ಸಂಘಸಂಸ್ಥೆಗಳು ಭಾಗವಹಿಸಿದವು.