ಮಂಗಳೂರು: ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮಿ ಜ.21ರಂದು ಲಿಂಗೈಕ್ಯರಾಗಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು “ಟೀಮ್ ಬಂಗದ ಬೊಲ್ಪುಲು” ತಂಡದ ಪರವಾಗಿ ಮಂಗಳೂರಿನ ಎಬಿವಿಪಿ ಕಾರ್ಯಾಲಯದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಲಾಯಿತು.


ಚೆನ್ನಯ್ಯ ಸ್ವಾಮಿ ಮಹಾನಗರ ಸೇವಾ ಪ್ರಮುಖ್ ಸ್ವಾಮಿಗಳ ಬಗ್ಗೆ ಮಾತನಾಡಿ ಅವರ ಜೀವನ ಚರಿತ್ರೆ ಬಗ್ಗೆ ಸಂದೇಶ ಸಾರಿದರು ಹಾಗೂ ಈ ಕಾರ್ಯಕ್ರಮದಲ್ಲಿ ಟೀಮ್ ಬಂಗದ ಬೊಲ್ಪುಲು ಸದಸ್ಯರು ಹಾಗೂ ಹಿಂದೂ ಸಂರಕ್ಷಣಾ ಸಮಿತಿ ಇದರ ಅಧ್ಯಕ್ಷರು ಕೆ.ಆರ್.ಶೆಟ್ಟಿ ಅಡ್ಯಾರ್ ಪದವು ಮತ್ತು ಸದಸ್ಯರು ಹಾಗೂ ಸುತ್ತಮುತ್ತಲಿನ ಕೆಲ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.